ಹುಬ್ಬಳ್ಳಿ:ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ ನೂರು, ನೂರೈವತ್ತು, ಇನ್ನೂರರ ಗಡಿ ಸಮೀಪ ಕೊರೊನಾ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಬೆಡ್‌ಗಳ ವ್ಯವಸ್ಥೆ ಇಲ್ಲದೆ ಸೋಂಕಿತರುಪರದಾಡುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಬೆಡ್ ಇಲ್ಲ.. ಸೋಂಕಿತರಿಗೆ ಮನೆಯಲ್ಲಿಯೇ ಇರಿ ಅಂತಿದೆ ಧಾರವಾಡ ಜಿಲ್ಲಾಡಳಿತ
ಆಸ್ಪತ್ರೆಯಲ್ಲಿ ಬೆಡ್ಗಳಿಲ್ಲ, ವ್ಯವಸ್ಥೆ ಸರಿಯಿಲ್ಲವೆಂದು ಜಿಲ್ಲಾಡಳಿತದ ಕಚೇರಿಯ ಸಿಬ್ಬಂದಿ ಸೋಂಕಿತರಿಗೆ ಹೇಳಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಸೋಂಕಿತ ವ್ಯಕ್ತಿ ಇದೀಗ ಮನೆಯಲ್ಲಿ ಐಸೋಲೇಷನ್ ಆಗುವಂತಾಗಿದೆ..
ನವನಗರದ ಅಧ್ಯಾಪಕ ನಗರದ 53 ವರ್ಷದ ಎಂಜಿನಿಯರೊಬ್ಬರಿಗೆ ಸೋಂಕು ದೃಢಪಟ್ಟು, ನಾಲ್ಕು ದಿನವಾದ್ರೂ ಆಸ್ಪತ್ರೆಗೆ ದಾಖಲಿಸಿಲ್ಲ. ಆಸ್ಪತ್ರೆಗೆ ದಾಖಲಿಸಿ ಅಂತಾ ಸೋಂಕಿತರ ಸಂಬಂಧಿಕರು ಜಿಲ್ಲಾಡಳಿತಕ್ಕೆ ಪದೇಪದೆ ಫೋನ್ ಮಾಡಿದ್ರೂ, ಆಸ್ಪತ್ರೆಗೆ ದಾಖಲಿಸದೇ ಮನೆಯಲ್ಲಿ ಹೋಮ್ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆಯಿರಿ ಎನ್ನುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಬೆಡ್ಗಳಿಲ್ಲ. ವ್ಯವಸ್ಥೆ ಸರಿಯಿಲ್ಲವೆಂದು ಜಿಲ್ಲಾಡಳಿತದ ಕಚೇರಿಯ ಸಿಬ್ಬಂದಿ ಸೋಂಕಿತರಿಗೆ ಹೇಳಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಸೋಂಕಿತ ವ್ಯಕ್ತಿ ಇದೀಗ ಮನೆಯಲ್ಲಿ ಐಸೋಲೇಷನ್ ಆಗುವಂತಾಗಿದೆ. ಸೋಂಕಿತರ ಸಂಬಂಧಿಕರು ಪದೇಪದೆ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಫೋನ್ ಮಾಡಿದ ನಂತರ, ಇದೀಗ ಸೋಂಕಿತರ ಮನೆ ಮುಂಭಾಗವನ್ನ ಸೀಲ್ಡೌನ್ ಮಾಡಲಾಗಿದೆ.