ಹುಬ್ಬಳ್ಳಿ:ಮಳೆ ನಿಂತರೂ ಮಳೆ ಹನಿ ಮಾತ್ರ ನಿಲ್ಲುತ್ತಿಲ್ಲ ಅನ್ನೋ ಹಾಗೆ 'ನಿಖಿಲ್ ಎಲ್ಲಿದ್ದೀಯಪ್ಪ' ಟ್ರೋಲ್‌ನ ಸದ್ದು ಇನ್ನೂ ನಿಲ್ಲುತ್ತಿಲ್ಲ. ಇಷ್ಟು ದಿನ ಸೋಷಿಯಲ್ ಮೀಡಿಯಾದಲ್ಲಿ ಈ ಟ್ರೋಲ್ ಸದ್ದು ಮಾಡಿತ್ತು. ಆದರೆ, ಇದೀಗ ಸಭೆ-ಸಮಾರಂಭಗಳಲ್ಲೂ ಅದೇ ಧ್ವನಿ ಕೇಳಿಸ ತೊಡಗಿದೆ.
ಮತ್ತೆ ಸೌಂಡ್ ಮಾಡಿದ 'ನಿಖಿಲ್ ಎಲ್ಲಿದ್ದೀಯಪ್ಪ'.. ಇದಕ್ಕೆ ಅಂಬಿ ಪುತ್ರ ಅಭಿಷೇಕ್ ಹೀಗಂದರು.. - etv bharat
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ 'ನಿಖಿಲ್ ಎಲ್ಲಿದ್ದೀಯಪ್ಪ' ಟ್ರೋಲ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. ಸಂಸದೆ ಸುಮಲತಾ ಅಂಬರೀಶ್ ಅವರ ಮಗ ಅಭಿಷೇಕ್ ಈ ಬಗ್ಗೆ ಏನಂದ್ರು ಗೊತ್ತಾ?
ಸಂಗ್ರಹ ಚಿತ್ರ
ಇಂದು ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಸಭಾಭವನದಲ್ಲಿ ಅಮರ್ ಚಿತ್ರದ ಪ್ರಮೋಷನ್ ಹಿನ್ನೆಲೆ ಸಂವಾದ ಏರ್ಪಡಿಸಲಾಗಿತ್ತು. ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಅವರ ಸಂವಾದ ಶುರುವಾಗುತ್ತಿದ್ದಂತೆ ಅಲ್ಲಿದ್ದ ವಿದ್ಯಾರ್ಥಿಗಳಿಂದ ನಿಖಿಲ್ ಎಲ್ಲಿದ್ದೀಯಪ್ಪ... ನಿಖಿಲ್ ಎಲ್ಲಿದ್ದೀಯಪ್ಪ... ಎಂಬ ಕೂಗು ಮೊಳಗಿತು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೇ ನೀಡಿದ ಅಭಿಷೇಕ್ ಅಂಬರೀಶ್, ಯಾರದ್ರೂ ಎಲ್ಲಾದ್ರೂ ಹೋಗ್ಲಿ ನಾವು ಇಲ್ಲೇ ಇದ್ದೀವಿ. ಅದನ್ನ ಬಿಟ್ಟುಬಿಡಿ ಎಂದು ಹೇಳುವ ಮೂಲಕ ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಕೂಗಿಗೆ ಅಂತ್ಯ ಹಾಡಿದರು.