ಹುಬ್ಬಳ್ಳಿ: ಎಲ್ಲ ಸಮಾಜದವರಿಗೆ ನ್ಯಾಯ ಕೊಟ್ಟಿದ್ದು ಅದಕ್ಕಾಗಿಯೇ ನಾಡಗೀತೆಯೊಳಗೆ ಎಲ್ಲ ಮಹಾನುಭಾವರ ಹೆಸರು ಹೇಳಿದ್ದಾರೆ. ಆದರೆ ಆಚಾರ್ಯರಿಂದ ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದಿರುವ ನಿಜಗುಣಾನಂದ ಸ್ವಾಮೀಜಿಗೆ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ತಿರುಗೇಟು ನೀಡಿದ್ದಾರೆ.
ಸಂವಿಧಾನ ರಚನೆಯಲ್ಲಿ ಬ್ರಾಹ್ಮಣರಿದ್ದರೇ?: ನಿಜಗುಣಾನಂದ ಶ್ರೀಗೆ ಸಮೀರಾಚಾರ್ಯ ಟಾಂಗ್ - ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ
ಸಮಾಜದೊಳಗೆ ನಿಮಗೆ ನ್ಯಾಯ ಮೂನ್ನೂರು ಕೋಟಿ ಕಲ್ಲಿನ ದೇವರುಗಳಿಂದಲೂ ಸಿಕ್ಕಿಲ್ಲ. ಅಂಬೇಡ್ಕರ್ ಅವರು ಬರೆದಿರೋ ಸಂವಿಧಾನದಿಂದ ನಿಮಗೆ ನ್ಯಾಯ ಸಿಕ್ಕಿದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ನಿಜಗುಣಾನಂದ ಸ್ವಾಮೀಜಿಗೆ ತಿಳಿ ಹೇಳಿದ್ದಾರೆ.
ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಅವರು, ಮೂರು ಆಚಾರ್ಯರ ಬಗ್ಗೆ ನಿಜಗುಣಾನಂದ ಸ್ವಾಮೀಜಿ ಅಧ್ಯಯನ ಮಾಡಿದ್ದಾರೋ? ಎಂದು ಪ್ರಶ್ನಿಸಿ. ನಾಡಗೀತೆಯ ಸಾಲುಗಳು, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರ ಜೀವನದ ವಿವರಣೆ ನೀಡಿದ್ದಾರೆ.
ಮಾತಿಗೊಮ್ಮೆ ಜಾತಿ ಎಳೆದು ಬ್ರಾಹ್ಮಣರನ್ನು ಅಲ್ಲಗೆಳೆಯುತ್ತಿದ್ದಿರಿ, ಎಲ್ಲ ಬ್ರಾಹ್ಮಣರು ತಪ್ಪು ಮಾಡಿದ್ದಾರೆಯೇ? ಯಾರೋ ಒಬ್ಬರು ತಪ್ಪು ಮಾಡಿದ್ದನ್ನು ಎಲ್ಲರಿಗೂ ಚುಚ್ಚಿ ಮಾತನಾಡುತ್ತೀರಿ. ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿದ್ದವರು ಬಿ.ಆರ್ ಅಂಬೇಡ್ಕರ್ ಅವರ ಸಮಿತಿಯಲ್ಲಿ ಯಾರಿದ್ದರು ಎಂಬುದು ನಿಮಗೆ ಗೊತ್ತೇ?, ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಬ್ರಾಹ್ಮಣರ ಹೆಸರು ಹೇಳಿ ಎಂದು ನಿಜಗುಣಾನಂದ ಸ್ವಾಮೀಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.