ಧಾರವಾಡ:ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಸೇರುತ್ತಾರಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ನ.13ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬರಲಿದೆ. ಅದನ್ನು ನೋಡಿಕೊಂಡು ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದಿದ್ದಾರೆ.
ಅನರ್ಹ ಶಾಸಕರ ಕುರಿತು ಸುಪ್ರೀಂ ತೀರ್ಪು ಬಂದ್ಮೇಲೆ ಬಿಜೆಪಿಯಿಂದ ಮುಂದಿನ ನಿರ್ಧಾರ: ಶೆಟ್ಟರ್
ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ. ಅಲ್ಲಿವರೆಗೆ ನಾನು ಹೆಚ್ಚಿಗೆ ಮಾತನಾಡೊಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
dvd
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ರಾಜು ಕಾಗೆ ಹೋಗಿ ಡಿಕೆಶಿಯನ್ನು ಭೇಟಿಯಾಗಿದ್ದು ಮಾಧ್ಯಮಗಳಿಂದ ಗೊತ್ತಾಗಿದೆ. ಅದರ ಬಗ್ಗೆ ರಾಜ್ಯಾಧ್ಯಕ್ಷರು ಮತ್ತು ಸಿಎಂ ವಿಚಾರ ಮಾಡುತ್ತಾರೆ. ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರುವ ಹೇಳಿಕೆ ನೀಡಿಲ್ಲ ಎಂದರು.
ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ರಾಜಕೀಯ ಮೇಲಾಟಗಳೆಲ್ಲ ನಡೆಯುತ್ತಿರುತ್ತವೆ. ತೀರ್ಪು ಬಂದ ಬಳಿಕ ಮುಂದಿನ ರಾಜಕೀಯ ನಿರ್ಣಯಗಳು ಆಗುತ್ತವೆ. ರಾಜು ಕಾಗೆ ಮತ್ತಿತರರು ಯಾರನ್ನೇ ಭೇಟಿಯಾದರೂ ಆ ಬಗ್ಗೆ ಹೆಚ್ಚಿಗೆ ಮಾತನಾಡೊಲ್ಲ ಎಂದು ಶೆಟ್ಟರ್ ಜಾರಿಕೊಂಡಿದ್ದಾರೆ.