ಧಾರವಾಡ:ನಗರದಲ್ಲಿ ನಿನ್ನೆ ನಿರ್ಮಾಣ ಹಂತದ ಕಟ್ಟಡ ಕುಸಿದು ಹಲವಾರು ಜನರು ಸಿಲುಕಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ ತಮ್ಮ ಬಾಂಧವರು ಏನಾದರೋ ಎಂಬ ಆತಂಕ ಕುಟುಂಬಗಳಲ್ಲಿ ಮನೆ ಮಾಡಿದೆ.
ಅಂತೆಯೆ, ಈ ಅವಘಡದಲ್ಲಿ ಸಿಲುಕಿರುವ ತನ್ನ ಮಗ ಸುರಕ್ಷಿತವಾಗಿ ಮರಳಿ ಬರಲೆಂದು ತಾಯಿವೋರ್ವಳು ದೇವರ ಮೊರೆ ಮುಂದೆ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿದೆ.
ಕಟ್ಟಡದಡಿ ಸಿಲುಕಿದ ಮಗಸುರಕ್ಷಿತವಾಗಿ ಹಿಂದಿರುಗಲಿ ಎಂದು ತಾಯಿಯೊಬ್ಬರು ದೇವರನ್ನು ಬೇಡಿಕೊಂಡರು ಮಂಗಳವಾರ ಕುಸಿದ ಕಟ್ಟಡದ ಕಂಪ್ಯೂಟರ್ ಕೇಂದ್ರದಲ್ಲಿ ಅನೂಪ ಎಂಬುವರು ಇದ್ದರು. ಕಟ್ಟಡ ಕುಸಿದಾಗ ಆತ ಸಹ ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಜೀವನ್ಮರಣದ ನಡುವೆ ಹೋರಾಡುತ್ತಿರುವ ಮಗ ಯಾವುದೇ ಆಪಾಯವಿಲ್ಲದೆ ಮನೆಗೆ ಹಿಂದಿರುಗಲಿ ಎಂದು ಅನೂಪ ತಾಯಿ ರೇಖಾ ಅವರು ದೇವರ ಮೊರೆ ಹೋಗಿದ್ದಾರೆ.
ಕುಸಿದು ಬಿದ್ದಿರುವ ಇದೇ ಕಟ್ಟಡದಲ್ಲಿ ಅನೂಪ್ ಕಂಪ್ಯೂಟರ್ ಸೆಂಟರ್ ಇಟ್ಟುಕೊಂಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅನೂಪ್ ತಾಯಿಗೆ ಏನು ಮಾಡಬೇಕೆಂದು ತೋಚದೆ ಕಣ್ಣೀರಿಟ್ಟರು. ಕಾರ್ಯಾಚರಣೆ ನಡೆಯುತ್ತಿರುವ ಜಾಗದ ಪಕ್ಕದಲ್ಲಿರುವ ಕಾರ್ ಶೋ ರೂಂನಲ್ಲಿ ಅನೂಪ್ ತಾಯಿ ದೇವರ ಫೋಟೋಗಳಿಗೆ ದೀಪ ಹಚ್ಚಿ, ತನ್ನ ಮಗನನ್ನು ಸುರಕ್ಷಿತವಾಗಿ ಕಳಿಸಿಕೊಡು ಭಗವಂತ ಎಂದು ಪ್ರಾರ್ಥಿಸುತ್ತಿದ್ದಾರೆ.