ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮೂರು ಸಾವಿರ ವಿರಕ್ತಮಠದಲ್ಲಿ ಮುಂಬರುವ ದಿನಗಳಲ್ಲಿ ಗೋಶಾಲೆ ತೆರೆಯಲಾಗುತ್ತಿದ್ದು, ಧಾರವಾಡ ಗ್ರಾಮೀಣ ಶಾಸಕ ಗೋವುಗಳನ್ನು ದಾನ ಮಾಡಿದ್ದಾರೆ.
ಮೂರು ಸಾವಿರ ವಿರಕ್ತಮಠಕ್ಕೆ ಗೋವು ದಾನ ಮಾಡಿದ ಗ್ರಾಮೀಣ ಶಾಸಕ - ಧಾರವಾಡ ಜಿಲ್ಲೆ ಸುದ್ದಿ
ಮೂರು ಸಾವಿರ ವಿರಕ್ತಮಠದ ಪೀಠಾಧಿಪತಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಮ್ಮುಖದಲ್ಲಿ ಗಿರ್ ಮತ್ತು ಮಲ್ನಾಡು ಗಿಡ್ಡ ತಳಿಯ ಎರಡು ಗೋವಿನ ಕರುಗಳನ್ನು ಶಾಸಕ ಶಾಸಕ ಅಮೃತ್ ದೇಸಾಯಿ ದಾನ ಮಾಡಿದ್ದಾರೆ.
ಗೋವು ದಾನ ಮಾಡಿದ ಗ್ರಾಮೀಣ ಶಾಸಕ
ಶಾಸಕ ಅಮೃತ್ ದೇಸಾಯಿ ಅವರು ಕುಟುಂಬ ಸಮೇತರಾಗಿ ಮಠಕ್ಕೆ ಭೇಟಿ ನೀಡಿ ಪೀಠಾಧಿಪತಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಮ್ಮುಖದಲ್ಲಿ ಗಿರ್ ಮತ್ತು ಮಲ್ನಾಡು ಗಿಡ್ಡ ತಳಿಯ ಎರಡು ಗೋವಿನ ಕರುಗಳನ್ನು ದಾನ ಮಾಡಿ ಗೋಶಾಲೆ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ.