ಹುಬ್ಬಳ್ಳಿ:ಮೈಸೂರು ದಸರಾ ಉತ್ಸವದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಹುಬ್ಬಳ್ಳಿಯ ಶ್ವೇತಾ 'ಮಿಸ್ ಯುವ ಕರ್ನಾಟಕ ಅವಾರ್ಡ್' ಅನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಿಸ್ ಯುವ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ವೇತಾ ದಸರಾ ಉತ್ಸವದ ಪ್ರಯುಕ್ತ ಮೈಸೂರಿನಲ್ಲಿ ನಡೆದ ಮಿಸ್ಟರ್ ಆಂಡ್ ಮಿಸ್ ಯುವ ಕರ್ನಾಟಕ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದ ಚಂದ್ರಕಾಂತ್ ನಗರದ ನಿವಾಸಿ ಶ್ವೇತಾ ಮಾಲತೇಶ್ ಬಾರ್ಕಿ ‘ಮಿಸ್ ಯುವ ಕರ್ನಾಟಕ ಅವಾರ್ಡ್’ ಪಡೆದು, ಹುಬ್ಬಳ್ಳಿ ಮಂದಿಯ ಪ್ರೀತಿಗೆ ಪಾತ್ರರಾಗಿದ್ದಾರೆ.
ಮಿಸ್ ಯವ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ವೇತಾ ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಶ್ವೇತಾ, 2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸ್ಯಾಂಡಲ್ವುಡ್ ಈವೆಂಟ್ಸ್ ಮತ್ತು ಈಶ್ ಈವೆಂಟ್ಸ್ ಆಯೋಜಿಸಿದ್ದ 'ಸಾಂಸ್ಕೃತಿಕ ಸುಂದರಿ' ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕುಟುಂಬ ಹಾಗೂ ನಾಡಿಗೆ ಕೀರ್ತಿ ತರುತ್ತಿರುವ ಇವರಿಗೆ ಅವರ ತಂದೆ ಮಾಲತೇಶ್ ಬಾರ್ಕಿ ಹಾಗೂ ತಾಯಿ ಮೀನಾಕ್ಷಿ ಅವರು ಬೆಂಗಾವಲಾಗಿ ನಿಂತಿದ್ದಾರೆ. ವಿಶೇಷವೆಂದರೆ ಶ್ವೇತಾಳ ತಂದೆ ಮತ್ತು ತಾಯಿ ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.