ಧಾರವಾಡ:ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಸಚಿವ ಶಿವರಾಮ ಹೆಬ್ಬಾರ್ ನಡೆಸಿದ ಪ್ರಗತಿ ಪರಿಶೀಲನಾ ಸಭೆ ಜನಜಂಗುಳಿಯಿಂದ ಕೂಡಿತ್ತು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಜಂಗುಳಿ: ಸಾಮಾಜಿಕ ಅಂತರ ಮಾಯ - ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಧಾರವಾಡ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಸಚಿವ ಶಿವರಾಮ ಹೆಬ್ಬಾರ್ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಜಂಗುಳಿ: ಸಾಮಾಜಿಕ ಅಂತರ ಮಾಯ
ಪ್ರಗತಿ ಪರಿಶೀಲನಾ ಸಭೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಆಗಮಿಸುತ್ತಿದ್ದಂತೆ ಹೆಚ್ಚಿನ ಜನರು ಸೇರಿಕೊಂಡಿದ್ದು, ಸಾಮಾಜಿಕ ಅಂತರ ಗಾಳಿ ತೂರಲಾಗಿತ್ತು. ಜೊತೆಗೆ ಕೆಲವರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಮಾಧ್ಯಮದವರು ಚಿತ್ರೀಕರಿಸುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ನಕಲಿ ಕಾರ್ಮಿಕರಿಗೆ ನಿಯಂತ್ರಣ ಹಾಕುವಂತೆ ಸಚಿವರಿಗೆ ಕಾರ್ಮಿಕ ಮುಖಂಡರು ಮನವಿ ಮಾಡಿಕೊಂಡರು.