ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ವಿಶೇಷ ಚೇತನರ ಬಾಲಮಂದಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವೆ ಶಶಿಕಲಾ ಜೊಲ್ಲೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಣಕಲ್ಲಿನ ವಿಶೇಷಚೇತನ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ನಿನ್ನೆ ಸಂಜೆ ಕಾರ್ಯಕ್ರಮ ಆಯೋಜಿಸಿದ್ದು, ಮಕ್ಕಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

Minister Shashikala Jolle celebrates birthday with special abled children
ವಿಶೇಷ ಚೇತನರ ಬಾಲಮಂದಿರದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವೆ ಶಶಿಕಲಾ ಜೊಲ್ಲೆ

By

Published : Nov 19, 2020, 7:33 AM IST

ಹುಬ್ಬಳ್ಳಿ: ವಿಶೇಷ ಚೇತನ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವು ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸುತ್ತಿದೆ. ಉಣಕಲ್ಲಿನ ವಿಶೇಷಚೇತನ ಬಾಲಕಿಯರ ಸರ್ಕಾರಿ ಬಾಲಮಂದಿರ ನಾಡಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಉಣಕಲ್ಲಿನ ವಿಶೇಷಚೇತನ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ನಿನ್ನೆ ಸಂಜೆ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಮಕ್ಕಳು ನಿರ್ಮಿಸಿದ ಕರಕುಶಲ ಕಲಾ ವಸ್ತುಗಳು, ಚಟುವಟಿಕೆಗಳನ್ನು ವೀಕ್ಷಿಸಿ ಮಾತನಾಡಿದರು.

ವಿಶೇಷ ಚೇತನರ ಬಾಲಮಂದಿರದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವೆ ಶಶಿಕಲಾ ಜೊಲ್ಲೆ

ಇಂದು ನನ್ನ ಜೀವನದ ಚಿರಸ್ಮರಣೀಯ ಕ್ಷಣವಾಗಿದೆ. ಸಾಮಾನ್ಯ ಆರೋಗ್ಯವಂತ ಮಗು ಜನಿಸಿದಾಗ ಮನೆಯಲ್ಲಿ ನಿರ್ಮಾಣವಾಗುವ ಸಂತಸದ ವಾತಾವರಣವೇ ಬೇರೆ, ವಿಶೇಷಚೇತನ ಮಕ್ಕಳು ಜನಿಸಿದಾಗ ಎದುರಾಗುವ ಸನ್ನಿವೇಶವೇ ಬೇರೆಯಾಗಿರುತ್ತದೆ. ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಈ ವಿಶೇಷ ಚೇತನ ಮಕ್ಕಳಿಗೆ ಪ್ರೀತಿ ತೋರಬೇಕು. ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲಮಂದಿರಗಳ ಮೂಲಕ ಈ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಶ್ರಮಿಸುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಪರಿವರ್ತನೆ, ಸುಧಾರಣೆಗಳಾಗಿವೆ. ಕೋವಿಡ್ ಹಿನ್ನೆಲೆಯಲ್ಲಿ ಇದರ ಬಗ್ಗೆ ವ್ಯಾಪಕ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಇನ್ನು ಮುಂದೆ ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದು ಸಚಿವರು ತಿಳಿಸಿದರು.

ಮಕ್ಕಳೊಂದಿಗೆ ಹುಟ್ಟುಹಬ್ಬ:

ವಿಶೇಷಚೇತನ ಮಕ್ಕಳಿಗೆ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಕೈ ತುತ್ತು ನೀಡಿ, ಊಟ ಮಾಡಿಸಿದರು. ಬಾಲಮಂದಿರದಲ್ಲಿರುವ ಎಲ್ಲಾ 47 ಮಕ್ಕಳಿಗೆ ಬಟ್ಟೆ, ಸಿಹಿ ಖಾದ್ಯಗಳನ್ನು ನೀಡಿದರು. ಜೊತೆಗೆ ಅವರೊಂದಿಗೆ ಬೆರೆತು ಆಕಾಶಬುಟ್ಟಿಯನ್ನು ಬಾನಂಗಳಕ್ಕೆ ಹಾರಿಸಿ ತಮ್ಮ ಪ್ರೀತಿ, ಸಂತಸ ಹಂಚಿಕೊಂಡರು. ಬಾಲಮಂದಿರದಲ್ಲಿಯೇ ಮಕ್ಕಳೊಂದಿಗೆ ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದರು.

ABOUT THE AUTHOR

...view details