ಕರ್ನಾಟಕ

karnataka

ETV Bharat / state

ಪಾಲಿಕೆ ಅಧಿಕಾರಿಗಳ ವಿರುದ್ಧ ಗುಡುಗಿದ ಪ್ರಲ್ಹಾದ್​ ಜೋಶಿ! - Minister Prahlad Joshi

ಜಾಗೃತಿ ಮೂಡಿಸುವ ಉದ್ದೇಶದಿಂದ ದಂಡ ಅಥವಾ ಎಫ್​ಐಆರ್​ ದಾಖಲಿಸಲಿ. ಕೋವಿಡ್ ಹೆಸರಲ್ಲಿ ಸುಲಿಗೆಗೆ ಅವಕಾಶ ನೀಡಬೇಡಿ. ಹಣ ನೀಡಿದರೆ ಬಿಡುತ್ತೇವೆ ಇಲ್ಲವಾದರೆ ಎಫ್‌ಐಆರ್​ ದಾಖಲಿಸುವುದಾಗಿ ಧಮ್ಕಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು..

ಪ್ರಲ್ಹಾದ್​ ಜೋಶಿ
ಪ್ರಲ್ಹಾದ್​ ಜೋಶಿ

By

Published : Apr 18, 2021, 2:28 PM IST

ಹುಬ್ಬಳ್ಳಿ: ಪಾಲಿಕೆ ಅಧಿಕಾರಿಗಳು ಹೆಚ್ಚು ಜನ ಸೇರಿದರೆ ದಾಳಿ ನಡೆಸಿ ದಂಡ ವಸೂಲಿ ಮಾಡುತ್ತಾರೆ ವಿನಃ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಬೇಸರ ವ್ಯಕ್ತಪಡಿಸಿದರು.

ನಗರದ ಇಂದಿರ ಗಾಜಿನ ಮನೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೋವಿಡ್ ಗೈಡ್‌ಲೈನ್ಸ್​ಗಳನ್ನೇ ಬಂಡವಾಳ ಮಾಡಿಕೊಂಡ ಪಾಲಿಕೆ ಮತ್ತು ಪೊಲೀಸ್ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ, ಪಾಲಿಕೆ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿಗಳು ಮುಂದೆಯೇ ಹೇಳಿದರು.

ಜಾಗೃತಿ ಮೂಡಿಸುವ ಉದ್ದೇಶದಿಂದ ದಂಡ ಅಥವಾ ಎಫ್​ಐಆರ್​ ದಾಖಲಿಸಲಿ. ಕೋವಿಡ್ ಹೆಸರಲ್ಲಿ ಸುಲಿಗೆಗೆ ಅವಕಾಶ ನೀಡಬೇಡಿ. ಹಣ ನೀಡಿದರೆ ಬಿಡುತ್ತೇವೆ ಇಲ್ಲವಾದರೆ ಎಫ್‌ಐಆರ್​ ದಾಖಲಿಸುವುದಾಗಿ ಧಮ್ಕಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ABOUT THE AUTHOR

...view details