ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಟಿಕಾಯತ್ ಆಗಮಿಸಿ ಹೋರಾಟ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ: ಸಚಿವ ಬಿ.ಸಿ. ಪಾಟೀಲ - Dharwad

ರಾಕೇಶ್​ ಸಿಂಗ್ ಟಿಕಾಯತ್ ಕರ್ನಾಟಕಕ್ಕೆ ಆಗಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ ಪ್ರತಿಕ್ರಿಯಿಸಿದ್ದಾರೆ. ನಮ್ಮ ರಾಜ್ಯಕ್ಕೆ ಟಿಕಾಯತ್​ ಬಂದು ಹೋರಾಟ ಮಾಡುವಂತ ಪರಿಸ್ಥಿತಿ ಇಲ್ಲ ಎಂದಿದ್ದಾರೆ.

Minister B.C Patil Reaction
ಸಚಿವ ಬಿ.ಸಿ ಪಾಟೀಲ ಪ್ರತಿಕ್ರಿಯೆ

By

Published : Feb 27, 2021, 2:07 PM IST

ಧಾರವಾಡ: ಕರ್ನಾಟಕದಲ್ಲಿ ಹೋರಾಟ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ. ರಾಜ್ಯದಲ್ಲಿ ಶಾಂತಿ, ನೆಮ್ಮದಿ ಇದೆ. ಎಲ್ಲರೂ ನೆಮ್ಮದಿಯಿಂದ ಇದ್ದಾರೆ ಎಂದು ರಾಕೇಶ್​ ಸಿಂಗ್ ಟಿಕಾಯತ್ ಕರ್ನಾಟಕಕ್ಕೆ ಆಗಮಿಸುವ ವಿಚಾರಕ್ಕೆ ಧಾರವಾಡದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ಸಚಿವ ಬಿ.ಸಿ ಪಾಟೀಲ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಿಸಾನ್​ ಯೂನಿಯನ್​ ವಕ್ತಾರ ರಾಕೇಶ್​ ಸಿಂಗ್ ಟಿಕಾಯತ್ ಅವರು ಬಂದು ಇಲ್ಲಿ ಧರಣಿ ಮಾಡುವಂತಹುದು ಏನಿಲ್ಲ. ಮಧ್ಯಪ್ರದೇಶದಂತೆ ಟಿಕಾಯತ್ ಪ್ರವೇಶಕ್ಕೆ ನಿರ್ಬಂಧ ವಿಚಾರದ ಬಗ್ಗೆ ಸದ್ಯ ಏನೂ ಚಿಂತನೆ ನಡೆದಿಲ್ಲ. ರೈತ ಸಂಘಟನೆಗಳು ತಯಾರಿಗೆ ಸಭೆಗಳನ್ನು ಮಾಡಿದರೆ ಮಾಡಲಿ. ಅವರು ಸಂಘಟನೆ ಮಾಡುವುದು, ಸಭೆ ನಡೆಸುವುದು ಅವರ ಹಕ್ಕು ಎಂದರು.

ಕೃಷಿ ಸಿಬ್ಬಂದಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು ಎಲ್ಲಿಯೋ ಹೋದಾಗ ಅಪಘಾತವಾದರೆ ವಿವಿ ಹೊಣೆ ಹೇಗಾಗುತ್ತದೆ? ಯಾರಾರದ್ದೋ ಅಪಘಾತವಾದರೆ ವಿವಿ ಕಾರಣವಾ? ಖಾಸಗಿ ಜೀವನದಲ್ಲಿ ಪ್ರವಾಸಕ್ಕೆ ಹೋದಾಗ ಅಪಘಾತವಾದರೆ ವಿವಿ ಹೇಗೆ ಹೊಣೆ? ಅಪಘಾತಕ್ಕೂ,ಕಿರುಕುಳಕ್ಕೂ ಏನು ಸಂಬಂಧ? ಒತ್ತಾಯಪೂರ್ವಕವಾಗಿ ಕರೆದೊಯ್ದರೆ ಅಪಘಾತ ಮಾಡಿಸಲು ಸಾಧ್ಯವೇ? ಅದರ ಬಗ್ಗೆ ನನ್ನ ಗಮನಕ್ಕೆ ಬಂದರೆ ವಿಚಾರ ಮಾಡುತ್ತೇನೆ. ಅವಶ್ಯಕತೆ ಬಿದ್ದರೆ ತನಿಖೆ ಮಾಡಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಓದಿ:ಕರ್ನಾಟಕ, ಮಹಾರಾಷ್ಟ್ರ ರೈತರ ಬೆಂಬಲ ಸ್ವೀಕರಿಸಲಿರುವ ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್

ABOUT THE AUTHOR

...view details