ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಮಾಸ್ಕ್ ವೆಂಡಿಂಗ್ ಮಷಿನ್​ಗಳಲ್ಲಿ ಮಾಸ್ಕ್​ಗಳೇ ಮಾಯ - ಮಾಸ್ಕ್ ನೋ ಸ್ಟಾಕ್

ಹುಬ್ಬಳ್ಳಿ ಜನರಿಗೆ ಕಡಿಮೆ ಬೆಲೆಗೆ ಉತ್ತಮ ದರ್ಜೆಯ ಸರ್ಜಿಕಲ್ ಮಾಸ್ಕ್ ನೀಡಲು ಆರಂಭಿಸಿದ ಮಾಸ್ಕ್ ವೆಂಡಿಂಗ್ ಮಷಿನ್​ಗಳಲ್ಲಿ ಮಾಸ್ಕ್​ಗಳೇ ಇಲ್ಲದೇ ಜನ ಬರಿಗೈಯಲ್ಲಿ ವಾಪಸ್​ ತೆರಳುವಂತಾಗಿದೆ.

machine
ಮಾಸ್ಕ್ ವೆಂಡಿಂಗ್ ಮಷಿನ್​

By

Published : Jul 14, 2021, 7:43 PM IST

ಹುಬ್ಬಳ್ಳಿ:ಕಿಲ್ಲರ್ ಕೊರೊನಾ ಹಾವಳಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯಾದ್ಯಂತ ಹೆಚ್ಚಾಗಿದ್ದು ಜನರಿಗೆ ಕಡಿಮೆ ಬೆಲೆಗೆ ಉತ್ತಮ ದರ್ಜೆಯ ಸರ್ಜಿಕಲ್ ಮಾಸ್ಕ್ ದೊರೆಯಲಿ ಎಂಬ ಸದುದ್ದೇಶದಿಂದ ಮಾಸ್ಕ್ ವೆಂಡಿಂಗ್ ಮಷಿನ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ರೆ ವಾಣಿಜ್ಯ ನಗರಿಯ ಮಾಸ್ಕ್ ವೆಂಡಿಂಗ್ ಮಷಿನ್​​ಗಳು ಮಾಸ್ಕ್​ಗಳೇ ಇಲ್ಲದೇ ಖಾಲಿ ಖಾಲಿಯಾಗಿವೆ.

ಹುಬ್ಬಳ್ಳಿ-ಧಾರವಾಡದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ವೆಂಡಿಂಗ್ ಮಷಿನ್​ನಲ್ಲಿ 'ಮಾಸ್ಕ್ ನೋ ಸ್ಟಾಕ್' ಎಂದು ಬರುತ್ತಿದೆ. ಪ್ರಾರಂಭದಲ್ಲಿ ಮಾತ್ರ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಸ್ವಲ್ಪ ದಿನ ಆಯ್ತು ಅಂದರೆ ಸಾಕು, ಎಲ್ಲ ಹಾಳಾಗಿ ಹೋಗುತ್ತದೆ ಎಂಬುದಕ್ಕೆ ವಲಯ ಕಚೇರಿ 11ರಲ್ಲಿ ಸ್ಥಾಪನೆ ಮಾಡಿರುವ ವೆಂಡಿಂಗ್ ಮಷಿನ್ ಸಾಕ್ಷಿಯಾಗಿದೆ. ಇಲ್ಲಿ ಕಾಯಿನ್​ ಹಾಕಿ ಮಾಸ್ಕ್​ ಪಡೆಯಲು ಬಂದವರು, ಮಷಿನ್​ನಲ್ಲಿ ನೋ ಸ್ಟಾಕ್ ಅಂತಾ ಬರೋದನ್ನು ನೋಡಿ ಬರಿಗೈನಲ್ಲಿ ಹಿಂತಿರುಗುತ್ತಿದ್ದಾರೆ.

ಎಲ್ಲರಿಗೂ ಸುಲಭವಾಗಿ ಮಾಸ್ಕ್ ಸಿಗಬೇಕು ಎಂದು ಅಭಿಯಾನ ಮಾಡಿ ಈ ಮಾಸ್ಕ್ ವೆಂಡಿಂಗ್ ಮಷಿನ್ ಸ್ಥಾಪಿಸಲಾಯ್ತು. ಆದ್ರೆ ಏನೂ ಪ್ರಯೋಜನವಾಗ್ತಿಲ್ಲ ಅಂತಾ ಸಾರ್ವಜನಿಕರು ದೂರುವಂತಾಗಿದೆ.

ABOUT THE AUTHOR

...view details