ಕರ್ನಾಟಕ

karnataka

ETV Bharat / state

ಸುಳ್ಳು ದಾಖಲೆ ಸೃಷ್ಟಿಸಿ ರೈಲ್ವೆ ನೌಕರಿ ಪಡೆದ ಭೂಪ: 32 ವರ್ಷಗಳ ನಂತರ ಪ್ರಕರಣ ಬೆಳಕಿಗೆ - ಪರಿಶಿಷ್ಟ ಜಾತಿ ಪ್ರಮಾಣ ಪತ್ರ

ಆಂಧ್ರಪ್ರದೇಶ ಮೂಲದ‌ ವ್ಯಕ್ತಿಯೊಬ್ಬ ನಕಲಿ ದಾಖಲೆ ಸೃಷ್ಟಿಸಿ ನೈರುತ್ಯ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಂಡಿರುವ ಪ್ರಕರಣವೊಂದು ಬರೋಬ್ಬರಿ 32 ವರ್ಷದ ನಂತರ ಬೆಳಕಿಗೆ ಬಂದಿದೆ.

hubli
ಹುಬ್ಬಳ್ಳಿ

By

Published : Feb 13, 2023, 11:36 AM IST

ಹುಬ್ಬಳ್ಳಿ: ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ರೈಲ್ವೆ ನೌಕರಿ ಪಡೆದಿರುವ ಪ್ರಕರಣವೊಂದು ಬರೋಬ್ಬರಿ 32 ವರ್ಷಗಳ ನಂತರ ಬೆಳಕಿಗೆ ಬಂದಿದೆ. ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ. ಆಂಧ್ರಪ್ರದೇಶ ಮೂಲದ‌ ವ್ಯಕ್ತಿಯೊಬ್ಬ ರಾಜ್ಯದಲ್ಲಿನ ಪರಿಶಿಷ್ಟ ವರ್ಗದ ವಾಲ್ಮೀಕಿ ಸಮುದಾಯದ ನಕಲಿ ಪ್ರಮಾಣಪತ್ರ ಪಡೆದು ನೈರುತ್ಯ ರೈಲ್ವೆಯಲ್ಲಿ ಉದ್ಯೋಗ ಪಡೆದು ವಂಚಿಸಿದ್ದ ಎಂದು ತಿಳಿದು ಬಂದಿದೆ.

ಪ್ರಕಾಶಂ ಜಿಲ್ಲೆಯ ಗುದ್ದಲೂರು ತಾಲೂಕಿನ ಪೊದಿಲಕುಂಟಪಲ್ಲೆ ಗ್ರಾಮದ ಮಂಡ್ಲಾಚಕ್ರಧರ ವೆಂಕಟಸುಬ್ಬಯ್ಯ ವಂಚಿಸಿದ ಆರೋಪಿ. ಪರಿಶೀಲನೆ ನಡೆಸದೆ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದಲ್ಲಿ ವಾಲ್ಮೀಕಿ‌ ಸಮುದಾಯ ಹಿಂದುಳಿದ ವರ್ಗಕ್ಕೆ‌ ಬರುತ್ತದೆ. ಈ ವಿಷಯ ತಿಳಿದಿದ್ದರೂ, 1991ರ ಡಿಸೆಂಬರ್​​ನಲ್ಲಿ ಮಂಡ್ಲಾ ಚಕ್ರಧರ, ಹುಬ್ಬಳ್ಳಿ ತಹಶೀಲ್ದಾರ್​ಗೆ ಸುಳ್ಳು ಘೋಷಣಾ ಪತ್ರ, ದಾಖಲೆ ಸಲ್ಲಿಸಿ ರಾಜ್ಯದಲ್ಲಿನ ವಾಲ್ಮೀಕಿ ಪರಿಶಿಷ್ಟ ಸಮುದಾಯದ ಪ್ರಮಾಣ ಪತ್ರ ಪಡೆದಿದ್ದಾನೆ. ದಾಖಲೆಗಳನ್ನು ಪರಿಶೀಲನೆ ನಡೆಸಿದೆ, ಅವನ ಪೂರ್ವಜರ, ರಕ್ತಸಂಬಂಧಿಕರ ಹಾಗೂ ಆಚಾರ-ವಿಚಾರ ಪರಿಶೀಲನೆ ನಡೆಸದೆ ಅಂದಿನ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿ ಅಪರಾಧ ಎಸಗಿದ್ದಾರೆ.

ಎಫ್​ಐಆರ್​ ಪ್ರತಿ

15 ಮಂದಿ ವಿರುದ್ಧ ಪ್ರಕರಣ ದಾಖಲು:ಆಂಧ್ರಪ್ರದೇಶದ ಮಂಡ್ಲಾ ವೆಂಕಟಸುಬ್ಬಯ್ಯ ತನ್ನ ಹಾಗೂ ಇಬ್ಬರು ಮಕ್ಕಳ ಹೆಸರಲ್ಲೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ವಂಚಿಸಿದ್ದಾನೆ. ಈ ಕುರಿತು ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಅವಧಿಯ ತಹಶೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ಸೇರಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಾಸಕ ಭೀಮಾನಾಯ್ಕ್ ಸುಳ್ಳು ದಾಖಲೆ ಸೃಷ್ಟಿಸಿ ಸದಸ್ಯತ್ವ ಪಡೆದ ಆರೋಪ: ಸೂಕ್ತ ಕ್ರಮಕ್ಕೆ ಒತ್ತಾಯ

ಭೂಮಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ:ನಂಜನಗೂಡು ತಾಲೂಕು ಹಿಮ್ಮಾವಿನಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿದ್ದ 9 ಮಂದಿ ಹಾಗೂ ದಾಖಲೆಗಳನ್ನು ಪರಿಶೀಲಿಸದೇ ಕರ್ತವ್ಯ ಲೋಪವೆಸಗಿದ್ದ 7 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ಆದೇಶಿಸಿದ ಹಿನ್ನೆಲೆಯಲ್ಲಿ ನಂಜನಗೂಡು ಪಟ್ಟಣದ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಾಗಿತ್ತು.

ಕ್ರಿಮಿನಲ್ ಕೇಸ್: ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ತನಿಖೆ ಮಾಡುವಂತೆ ಆದೇಶ ಮಾಡಿದ್ದು, ಅದಕ್ಕೆ ಪೂರಕವಾಗಿ ನಂಜನಗೂಡು ತಾಲೂಕಿನ ಹಿಂದಿನ ತಹಸೀಲ್ದಾರ್ ನವೀನ್ ಜೋಸೆಫ್ ಸೇರಿದಂತೆ 16 ಮಂದಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ನಂಜನಗೂಡು ಹಾಲಿ ತಹಸೀಲ್ದಾರ್ ಶಿವಮೂರ್ತಿ ನೀಡಿದ ದೂರಿನನ್ವಯ ಪೋಲಿಸರು ಭೂ ನ್ಯಾಯ ಮಂಡಳಿ ಹಿಂದಿನ ಅಧ್ಯಕ್ಷ ಕೃಷ್ಣಮೂರ್ತಿ, ಭೂ ನ್ಯಾಯ ಮಂಡಳಿ ಸದಸ್ಯ ಕಾರ್ಯದರ್ಶಿ ಆಗಿದ್ದ ನಂಜನಗೂಡು ತಾಲೂಕಿನ ಹಿಂದಿನ ತಹಸೀಲ್ದಾರ್ ನವೀನ್ ಜೋಸೆಫ್, ಹಿಂದಿನ ಅಧಿಕಾರಿಗಳಾದ ಆರ್ ಆರ್ ಟಿ ಶಿರಸ್ತೇದಾರ್ ರಮೇಶ್ ಬಾಬು, ರಾಜಸ್ವ ನಿರೀಕ್ಷಕ ಶಿವರಾಜು, ಗ್ರಾಮ ಲೆಕ್ಕಿಗ ವೆಂಕಟೇಶ್ ಕರ್ತವ್ಯದಲ್ಲಿ ಲೋಪ ಎಸಗಿರುವುದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ:ಭೂಮಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದ ಕೇಸ್​: 16 ಜನರ ವಿರುದ್ಧ ದೂರು ದಾಖಲು, ಸರ್ಕಾರ ಸಿಐಡಿ ತನಿಖೆಗೆ ಆದೇಶ

ABOUT THE AUTHOR

...view details