ಕರ್ನಾಟಕ

karnataka

ETV Bharat / state

ವಿನಾಕಾರಣ ದಂಡ ವಸೂಲಿ ಆರೋಪ.. ಹುಬ್ಬಳ್ಳಿ ಪೊಲೀಸರ ಕಾಟಕ್ಕೆ ಬೇಸತ್ತು ಲಾರಿ ಚಾಲಕರಿಂದ ಹೆದ್ದಾರಿ ತಡೆ

ಪೊಲೀಸರು ವಿನಾಕಾರಣ ದಂಡ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ಮರಳು ಲಾರಿ ಚಾಲಕರು ಮತ್ತು ಮಾಲೀಕರು ಹುಬ್ಬಳ್ಳಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.

By

Published : Jun 29, 2021, 6:31 PM IST

lorry owners and drivers protest against police
ಲಾರಿ ಚಾಲಕರಿಂದ ಪ್ರತಿಭಟನೆ

ಹುಬ್ಬಳ್ಳಿ: ಪೊಲೀಸರು ವಿನಾಕಾರಣ ದಂಡ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ಮರಳು ಲಾರಿ ಚಾಲಕರು ಮತ್ತು ಮಾಲೀಕರು ಗಬ್ಬೂರ ಬೈಪಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮರಳು ಅಕ್ರಮಕ್ಕೆ ಲಾರಿ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಮನಸ್ಸಿಗೆ ಬಂದಂತೆ ದಂಡ ಹಾಕಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಲಾರಿ ಚಾಲಕರಿಂದ ಪ್ರತಿಭಟನೆ

ತಪಾಸಣೆ ಹೆಸರಿನಲ್ಲಿ ಪೊಲೀಸ್ ಇಲಾಖೆಯಿಂದ ನಡೆಯುವ ಭ್ರಷ್ಟಾಚಾರ ನಿಲ್ಲಬೇಕು, ರಾಜ್ಯಾದ್ಯಂತ ಒಂದೇ ಜಿಪಿಎಸ್ ನೀತಿ ಜಾರಿಗೆ ತರಬೇಕು. ಜಿಪಿಎಸ್ ಕಂಪನಿಗಳ ಜಿಲ್ಲಾವಾರು ಮನಸೋಯಿಚ್ಛೆ ದರ ನಿಗದಿ ಪಡಿಸುವುದನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದ್ರು. ಇದೇ ವೇಳೆ ಲಾರಿ ಮಾಲೀಕರು ಲಾರಿ ಕೆಳಗೆ ಮಲಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ವೇಳೆ ಕೆಲಹೊತ್ತು ಪೊಲೀಸರು ಹಾಗೂ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ:ರಾಜ್ಯದ ಜನರು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ಕೊಡುವ ದಿನಗಳು ದೂರವಿಲ್ಲ: HDK

ABOUT THE AUTHOR

...view details