ಹುಬ್ಬಳ್ಳಿ: ರಾಜ್ಯ ಸರ್ಕಾರ ಭಾನುವಾರದ ಲಾಕ್ಡೌನ್ ತೆರವುಗೊಳಿಸಿದ ಹಿನ್ನೆಲೆ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಸಾರ್ವಜನಿಕರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂಡೇ ಲಾಕ್ಡೌನ್ ತೆರವು: ಹುಬ್ಬಳ್ಳಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ - ಹುಬ್ಬಳ್ಳಿಯಲ್ಲಿ ಸಂಡೇ ಲಾಕ್ಡೌನ್ ಇಲ್ಲ
ರಾಜ್ಯ ಸರ್ಕಾರ ಸಂಡೇ ಲಾಕ್ಡೌನ್ ತೆರವುಗೊಳಿಸಿದ ಹಿನ್ನೆಲೆ ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನಜೀವನ ಎಂದಿನಂತಿದೆ.
ಹುಬ್ಬಳ್ಳಿಯಲ್ಲಿ ಎಂದಿನಂತೆ ಜನಜೀವನ
ಕೊರೊನಾ ತಡೆಗಟ್ಟುವ ಹಿನ್ನೆಲೆ ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್ಡೌನ್ ಘೋಷಣೆ ಮಾಡಿತ್ತು. ಈಗ ಲಾಕ್ಡೌನ್ ಸಡಿಲಿಕೆ 3.0 ನಲ್ಲಿ ಆಗಸ್ಟ್ 2 ರಿಂದ ಭಾನುವಾರದ ಲಾಕ್ಡೌನ್ಅನ್ನು ಸಹ ತೆರವುಗೊಳಿಸಲಾಗಿದೆ.
ನಗರದಲ್ಲಿ ವಾಹನ ಸಂಚಾರ ಸಹ ಎಂದಿನಂತೆ ಸಾಗಿದ್ದು, ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳು ಓಪನ್ ಆಗಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಳೆ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.