ಕಲಘಟಗಿ (ಧಾರವಾಡ): ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚುವರಿ ಕೆಲಸ, ಹೆಚ್ಚುವರಿ ಕೂಲಿ ಹಾಗೂ ಕಾಮಗಾರಿಗಳನ್ನು ಸ್ಥಳೀಯವಾಗಿ ನಿರ್ಧರಿಸಿ ಸ್ಥಳೀಯವಾಗಿ ನೀಡಬೇಕು ಎಂಬ ಬೇಡಿಕೆಗಳನ್ನಿಟ್ಟು, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಉದ್ಯೋಗ ಖಾತ್ರಿಯಲ್ಲಿ ಹೆಚ್ಚುವರಿ ಕೆಲಸ ನೀಡುವಂತೆ ಪ್ರಧಾನಿಗೆ ಕೂಲಿ ಕಾರ್ಮಿಕರಿಂದ ಪತ್ರ
ಲಾಕ್ಡೌನ್ನಿಂದಾಗಿ ಕೂಲಿ ಕಾರ್ಮಿಕರ ಬದುಕು ಹದಗೆಟ್ಟಿದೆ. ಶ್ರಮಿಕರ ಅಭಿವೃದ್ಧಿಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಕೆಲಸ ಹಾಗೂ ದಿನಗೂಲಿ ವೇತನವನ್ನು ಹೆಚ್ಚಿಸುವಂತೆ ಕೋರಿ ಕೂಲಿ ಕಾರ್ಮಿಕರ ಸಂಘಟನೆ ಪ್ರಧಾನ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದೆ.
ತಾಲೂಕಿನ ತಂಬೂರು, ಸಂಗಮೇಶ್ವರ, ಮಡ್ಕಿಹೊನ್ನಳ್ಳಿ ಹಾಗೂ ಇನ್ನಿತರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೂಲಿಕಾರರು ಈ ಮನವಿ ಸಲ್ಲಿಸಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಕೂಲಿ ಕಾರ್ಮಿಕರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಲಿಕಾರರಿಗೆ ಹೆಚ್ಚು ಕೆಲಸ ನೀಡಬೇಕು ಹಾಗೂ ಕನಿಷ್ಠ ನೂರು ದಿನಗಳ ಬದಲು, ಪ್ರತಿಯೊಬ್ಬ ಶ್ರಮಿಕರಿಗೆ 200 ದಿನಗಳ ಕೂಲಿ ಕೆಲಸ ನೀಡಬೇಕು. ದಿನಗೂಲಿಯನ್ನು 600 ರೂಪಾಯಿಗೆ ಹೆಚ್ಚಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.