ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಸೋತಿಲ್ಲ, ನಮ್ಮ ತಪ್ಪಿನಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ವಿರೋಧ ಪಕ್ಷದಲ್ಲಿ ಕುಳಿತು ನಾವು ಜವಾಬ್ದಾರಿಯುತ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಐದು ಜನ ಬಂಡಾಯ ಅಭ್ಯರ್ಥಿಗಳು, ಸ್ಥಳೀಯ ಮುಖಂಡರ ತಪ್ಪಿನಿಂದಾಗಿ ಅವರು ಗೆದ್ದಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಈಗಾಗಲೇ ತಿಳಿಸಿದ್ದಾರೆ. ಟಿಕೆಟ್ ಹಂಚಿಕೆ ತಪ್ಪಿನಿಂದ ನಮಗೆ ಹಿನ್ನಡೆಯಾಗಿದೆ. ಮತ ನೀಡಿದ ಎಲ್ಲಾ ಮತಬಾಂಧವರಿಗೆ ಧನ್ಯವಾದಗಳು ಎಂದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಸೋತಿಲ್ಲ, ಪಕ್ಷಕ್ಕೆ ಹಿನ್ನಡೆಯಾಗಿದೆ: ಡಿ.ಕೆ ಶಿವಕುಮಾರ್ ನಮ್ಮ ಪಕ್ಷ ಆಡಳಿತದಲ್ಲಿ ಇಲ್ಲ. ಹುಬ್ಬಳ್ಳಿಯಲ್ಲಿ ಹಾಲಿ ಸಿಎಂ, ಮಾಜಿ ಸಿಎಂ, ಕೆಂದ್ರದ ಮಂತ್ರಿ ಸೇರಿದಂತೆ ಅನೇಕ ನಾಯಕರು ಅಧಿಕಾರ ದುರುಪಯೋಗಪಡಿಸಿಕೊಂಡು ಅನುಕೂಲಕ್ಕೆ ತಕ್ಕಂತೆ ಪಾಲಿಕೆ ಚುನಾವಣೆ ಮಾಡಿದರು. ಜನರು ನಮಗೆ ಸಂಖ್ಯಾಬಲ ನೀಡದೇ ಹೋದರೂ ಉತ್ತಮ ಫಲಿತಾಂಶ ನೀಡಿದ್ದಾರೆ.
ನಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುತ್ತೇವೆ. ಕಲಬುರಗಿ ಹಾಗೂ ಹು-ಧಾದಲ್ಲಿ ನಮ್ಮ ಪಕ್ಷಕ್ಕೆ ಸಮಾಧಾನಕರ ಫಲಿತಾಂಶ ಸಿಕ್ಕಿದೆ. ಬೆಳಗಾವಿಯಲ್ಲಿ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಮಾಡಿದ್ದೇವೆ. ಅಲ್ಲಿ 20 ಸ್ಥಾನದ ನಿರೀಕ್ಷೆ ಮಾಡಿದ್ದೆವು ಎಂದು ಹೇಳಿದರು.
'ಗುಜರಾತ್ ಸಿಎಂ ಆಡಳಿತ ಸರಿ ಇರಲಿಲ್ಲ'
ಗುಜರಾತ್ ಸಿಎಂ ಅವರ ಆಡಳಿತ ವೈಖರಿ ಸರಿ ಇರಲಿಲ್ಲ, ಅಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಅವರ ಆಡಳಿತದಿಂದ ಜನರು ಬೇಸತ್ತು ಹೋಗಿದ್ದರು. ಮೂರು-ನಾಲ್ಕು ಜನರನ್ನು ಈಗಾಗಲೇ ಬದಲಾವಣೆ ಮಾಡಿದ್ದಾರೆ. ಕೋವಿಡ್ ನಿರ್ವಹಣೆಯಲ್ಲೂ ಅವರು ವಿಫಲವಾಗಿದ್ದಾರೆ. ಹೀಗಾಗಿ ಗುಜರಾತ್‌ನಲ್ಲಿ ಸಿಎಂ ಸೇರಿದಂತೆ ಕೇಂದ್ರ ಆರೋಗ್ಯ ಸಚಿವರನ್ನು ಸಹ ಬದಲಾವಣೆ ಮಾಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ:ಬಿಜೆಪಿ ತಿರುಕನ ಕನಸು ಕಾಣುತ್ತಿದೆ, ಅಧಿಕಾರಕ್ಕೆ ಬರಲು ವಾಮಮಾರ್ಗ ಹುಡುಕುತ್ತಿದೆ: ಶರಣಪ್ರಕಾಶ ಪಾಟೀಲ್