ಧಾರವಾಡ: ಬಸವರಾಜ ಬೊಮ್ಮಾಯಿ ಅವರೇ ನೀವು ಸರ್ಕಾರ ನಡೆಸುತ್ತಿದ್ದಿರೋ ಅಥವಾ ಬೇರೆಯವರು ನಡೆಸುತಿದ್ದಾರೋ?. ಮುಖ್ಯಮಂತ್ರಿಗಳು ಶಾಂತಿ, ನೆಮ್ಮದಿಯಿಂದ ಆಡಳಿತ ನಡೆಸಬೇಕು ಎಂದು ಧಾರವಾಡದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರಿಗೆ ಭರವಸೆ ನೀಡಬೇಕು. ಅದನ್ನ ಬಿಟ್ಟು ವಿರೋಧ ಪಕ್ಷಗಳ ವಿರುದ್ಧ ಜನರನ್ನ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಆಡಳಿತ ಇಟ್ಟುಕೊಂಡು ಕೆಳ ದರ್ಜೆಯ ಕೆಲಸ ಮಾಡಲು ಹೊರಟ ಬಿಜೆಪಿಯವರಿಗೆ ಮಾನ, ಮರ್ಯಾದೆ ಇದೆಯಾ?. ಮಾರುಕಟ್ಟೆಯಲ್ಲಿ ಮಾವಿನ ದರ ಬಿದ್ದು ಹೋಯ್ತು, ಯಾರು ಕೊಡ್ತಾರೆ. ಬೊಮ್ಮಾಯಿ ಅವರು ಖರೀದಿ ಮಾಡಲು ತಯಾರಿದ್ದಾರಾ?. ಮಾವು ವಾರ್ಷಿಕ ಬೆಳೆ. ಈ ಬಾರಿ ಫಸಲು ಕಡಿಮೆ ಇದೆ. ಮಾವಿಗೆ ವೈಜ್ಞಾನಿಕ ದರ ನೀಡಿ, ಮಾವಿನ ದರ ಕಡಿಮೆಯಾದರೆ ಸರ್ಕಾರದವರು ಖರೀದಿ ಮಾಡ್ತೀವಿ ಅಂತಾ ಘೋಷಣೆ ಮಾಡಿ ಎಂದು ಕೋಡಿಹಳ್ಳಿ ಒತ್ತಾಯಿಸಿದರು.
ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಅವರು ವಾಗ್ದಾಳಿ ನಡೆಸಿರುವುದು.. ಮಹಾದಾಯಿ ಯೋಜನೆ ವಿಚಾರದ ಕುರಿತು ಮಾತನಾಡಿದ ಅವರು, ಬೊಮ್ಮಾಯಿ ಅವರು ಮಹಾದಾಯಿ ಹಳ್ಳ ತೆಗೆಯೋಕೆ ಹೋಗಿದ್ರು. ಅವರಿಗೆ ಈ ಬಗ್ಗೆ ಸ್ಪಷ್ಟತೆ ಇದ್ದಿದ್ದರೆ ನೀರು ಮಲಪ್ರಭಾ ನದಿ ಸೇರುತಿತ್ತು. ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ನಾಟಕಕ್ಕೆ ಬಜೆಟ್ನಲ್ಲಿ ಹಣ ಇಟ್ಟಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಿದೆ.
ಔಷಧಿಗಳು 12ರಷ್ಟು ರೇಟ್ ಜಾಸ್ತಿ ಆಗಿದೆ. ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಭತ್ತ ಹಾಗೂ ರಾಗಿ ದರ ಎಪಿಎಂಸಿ ದರಕ್ಕಿಂತ ಕಡಿಮೆ ಇದೆ. ರೈತರ ಬಗ್ಗೆ ಮಾತನಾಡುವ ಯೋಗ್ಯತೆಯನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ. ಭೂಸುಧಾರಣೆ ಕಾಯ್ದೆ ಜಾರಿಗೆ ತಂದಿದ್ದಾರೆ. ಯಾರು ಬೇಕಾದ್ರೂ ಬೆಳೆ ಖರೀದಿ ಮಾಡಿ ಅಂತಾ ಅವಕಾಶ ಕೊಟ್ಟಿದ್ದಾರೆ. ಭೂಮಿ ಹಣವಿರುವವರ ಪಾಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಇಸ್ರೇಲ್ನಲ್ಲಿ ಭಯೋತ್ಪಾದನಾ ದಾಳಿ : ಇಬ್ಬರು ಮೃತ, 8 ಮಂದಿಗೆ ಗಾಯ