ಹುಬ್ಬಳ್ಳಿ:ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಇತ್ತೀಚಿಗೆ ಕೆಲವು ಅಸಾಧಾರಣವಾದ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಇಲ್ಲಿನ ವೈದ್ಯರ ತಂಡ ಅಪರೂಪ ಎನ್ನುವಂತಹ ಮತ್ತೊಂದು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ವ್ಯಕ್ತಿಯೊಬ್ಬನ ಹೊಟ್ಟೆಯೊಳಗಿರುವ ಹಲವು ಅಂಗಾಂಗಗಳು ಉಲ್ಟಾ ಪಲ್ಟಾ ಆಗಿದ್ದವು. ಬಲ ಭಾಗಕ್ಕೆ ಇರಬೇಕಾಗಿದ್ದವು ಎಡಭಾಗದಲ್ಲಿಯೂ, ಎಡ ಭಾಗದಲ್ಲಿ ಇರಬೇಕಾಗಿದ್ದ ಅಂಗಾಂಗಗಳು ಬಲಭಾಗದಲ್ಲಿಯೂ ಇದ್ದವು. ಡಾ.ಹೆಬಸೂರ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ಮೂಲಕ ಈ ಅಂಗಾಂಗಗಳನ್ನು ರಿಪ್ಲೇಸ್ ಮಾಡಿದ್ದಾರೆ.
ಈ ರೀತಿ ವ್ಯಕ್ತಿಗಳಲ್ಲಿ ಅಂಗಾಂಗಗಳು ವಿಚಿತ್ರವಾಗಿ ಕಂಡುಬರುವುದು ಅಪರೂಪ. ಇದಕ್ಕೆ ಸೈಟಸ್ ಇನ್ವರ್ಟಸ್ ಟೋಟಲಿಸ್ (situs inversus totalis) ಎಂದು ಕರೆಯುತ್ತಾರೆ. ಕಾರವಾರ ಜಿಲ್ಲೆಯ ಮುಂಡಗೊಡದ ಹಜಾರಿ ಎನ್ನುವ ವ್ಯಕ್ತಿಯ ಹೊಟ್ಟೆಯಲ್ಲಿ ಎಲ್ಲಾ ಅಂಗಾಂಗಗಳು ಉಲ್ಟಾಪಲ್ಟಾ ಆಗಿದ್ದವು. ಹುಟ್ಟಿನಿಂದಲೇ ಈ ವ್ಯಕ್ತಿಗೆ ಅಬ್ಡಾಮಿನಲ್ ಅಂಗಾಂಗಗಳು ಸಾಮಾನ್ಯ ವ್ಯಕ್ತಿಗಳ ಹಾಗೆ ಇರಲಿಲ್ಲ.
ಹಜಾರಿ ಅವರಿಗೆ ಹೃದಯ ಕೂಡ ಬಲ ಭಾಗಕ್ಕಿತ್ತು. ಇಂತಹ ಶಸ್ತ್ರ ಚಿಕಿತ್ಸೆ ಕಿಮ್ಸ್ ಇತಿಹಾಸದಲ್ಲಿ ಮಾಡಿಯೇ ಇರಲಿಲ್ಲ. ಉತ್ತರ ಕರ್ನಾಟಕ ಭಾಗದ ಯಾವುದೇ ಆಸ್ಪತ್ರೆಯಲ್ಲಿ ಇಂತಹ ಸವಾಲಿನ ಶಸ್ತ್ರ ಚಿಕಿತ್ಸೆ ಆಗಿರಲಿಲ್ಲ. ಆಪರೇಶನ್ ಬಳಿಕ ಹಜಾರಿ ಆರೋಗ್ಯವಾಗಿದ್ದಾರೆ. ಲ್ಯಾಪ್ರೋ ಸ್ಪೋಪಿಕ್ ಮೂಲಕ ಡಾ. ಹೆಬಸೂರು ನೇತೃತ್ವದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ವೃದ್ಧೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ ಗೆಡ್ಡೆ ಹೊರ ತೆಗೆದ ವೈದ್ಯರು