ಕರ್ನಾಟಕ

karnataka

ಕೋವಿಡ್‌ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ: ಶತಕದ ಸಾಧನೆಗೈದ ಹುಬ್ಬಳ್ಳಿಯ ಕಿಮ್ಸ್‌

By

Published : Oct 30, 2020, 10:22 AM IST

ಪ್ಲಾಸ್ಮಾ ದಾನಿಗಳಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣೆ ಮಾಡುವ ಮೂಲಕ ಪ್ಲಾಸ್ಮಾ ಸಂಗ್ರಹ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಿಮ್ಸ್ ಪ್ಲಾಸ್ಮಾ ಥೆರಪಿಯಲ್ಲಿ ಶತಕದತ್ತ ಮುನ್ನಡೆದಿದೆ.

ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆ
ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆ

ಹುಬ್ಬಳ್ಳಿ:ರಾಜ್ಯದಲ್ಲಿ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ, ಕೋವಿಡ್ ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ, ಡಯಾಲಿಸಿಸ್ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ಕಿಮ್ಸ್ ಆಸ್ಪತ್ರೆ ಈಗ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಪ್ಲಾಸ್ಮಾ ಥೆರಪಿ ಚಿಕಿತ್ಸೆಯಲ್ಲಿ ಕಿಮ್ಸ್ ಶತಕದತ್ತ ದಾಪುಗಾಲು ಹಾಕಿದೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳನ್ನು ಮನವೊಲಿಸಿ ಪ್ಲಾಸ್ಮಾ ಸಂಗ್ರಹಿಸುವುದು ಸಾಮಾನ್ಯದ ಕೆಲಸವಾಗಿರಲಿಲ್ಲ. ಈ ನಿಟ್ಟಿನಲ್ಲಿ ಪ್ಲಾಸ್ಮಾ ದಾನಿಗಳಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣೆ ಮಾಡುವ ಮೂಲಕ ಪ್ಲಾಸ್ಮಾ ಸಂಗ್ರಹ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಿಮ್ಸ್ ಪ್ಲಾಸ್ಮಾ ಥೆರಪಿಯಲ್ಲಿ ಶತಕದತ್ತ ಮುನ್ನಡೆದಿದೆ.

ಈಗಾಗಲೇ ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವ 50 ಜನರಿಂದ ಪ್ಲಾಸ್ಮಾ ಸಂಗ್ರಹಿಸಿ 90 ಜನರಿಗೆ ಪ್ಲಾಸ್ಮಾ ಥೆರಪಿ ಮಾಡಿದ್ದು,ಕಿಮ್ಸ್ ವೈದ್ಯರು ಇನ್ನೂ ಹೆಚ್ಚಿನ ಸೇವೆ ನೀಡಲು ಪಣ ತೊಟ್ಟಿದ್ದಾರೆ. ಪ್ಲಾಸ್ಮಾ ದಾನಿಗಳಿಂದ 400 ಎಂ.ಎಲ್ ಪ್ಲಾಸ್ಮಾ ಸಂಗ್ರಹಿಸಿ ತೀವ್ರ ತರಹದ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದೆ. ಈ ಮೂಲಕ ರಾಜ್ಯದ ಅತೀ ಹೆಚ್ಚು ಪ್ಲಾಸ್ಮಾ ಚಿಕಿತ್ಸೆ ನೀಡಿದ ಖ್ಯಾತಿಗೆ ಕಿಮ್ಸ್ ಪಾತ್ರವಾಗಿದೆ.

ABOUT THE AUTHOR

...view details