ಕರ್ನಾಟಕ

karnataka

ETV Bharat / state

ಮಗಳ ಜನ್ಮದಿನ ವಿಶಿಷ್ಟವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾದ ಕಿಮ್ಸ್ ವೈದ್ಯ - Hubli latest news

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ.ವೆಂಕಟೇಶ ಮೊಗಾರ ಅವರು ತಮ್ಮ ಮಗಳ ಜನ್ಮದಿನದ ನಿಮಿತ್ತ ಐದು ಜನ ವಿಕಚೇತನರಿಗೆ ಕೃತಕ ಕಾಲು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಜನ್ಮದಿನ ಆಚರಣೆ ಮಾಡಿದ್ದಾರೆ.

ಡಾ.ವೆಂಕಟೇಶ ಮೊಗಾರ
ಕೃತಕ ಕಾಲು ಜೋಡಣೆ

By

Published : Oct 6, 2020, 4:37 PM IST

ಹುಬ್ಬಳ್ಳಿ:ಮಕ್ಕಳ ಹುಟ್ಟು ಹಬ್ಬ ಅಂದ್ರೆ ತಂದೆ ತಾಯಿಗಳಿಗೆ ಎಲ್ಲಿಲ್ಲದ ಸಡಗರ. ಮಕ್ಕಳ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷತೆ ಮಾಡಬೇಕು ಎಂದು ಕೊಂಡಿರುತ್ತಾರೆ. ಅದೇ ರೀತಿ, ಹುಬ್ಬಳ್ಳಿ ವೈದ್ಯರೊಬ್ಬರು ತಮ್ಮ ಮಗಳ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.

ಕೃತಕ ಕಾಲು ವಿತರಣೆ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟೇಶ ಮೊಗಾರ ಅವರು ತಮ್ಮ ಮಗಳು ಶ್ರೇಯಾಳ ಜನ್ಮದಿನದ ನಿಮಿತ್ತ ಐದು ಜನ ವಿಕಚೇತನರಿಗೆ ಕೃತಕ ಕಾಲು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಜನ್ಮದಿನ ಆಚರಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಇನ್ನೂ ಕಾರ್ಯಕ್ರಮವನ್ನು ಹುಬ್ಬಳ್ಳಿ ಆಲ್ ಇಂಡಿಯಾ ಜೈನ್ ಯೂಥ್ ಫೆಡರೇಷನ್ ಮಹಾವೀರ ಲಿಂಬ್ ಸೆಂಟರ್​ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಮಹೇಂದ್ರ ಸಿಂಘಿ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ABOUT THE AUTHOR

...view details