ಕರ್ನಾಟಕ

karnataka

ETV Bharat / state

ಕೇಶ್ವಾಪೂರ ಪೊಲೀಸರ ಕಾರ್ಯಾಚರಣೆ: ಇಬ್ಬರು ಗಾಂಜಾ ಮಾರಾಟಗಾರರ ಬಂಧನ - ಹುಬ್ಬಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟ

ಹುಬ್ಬಳ್ಳಿಯ ಕೇಶ್ವಾಪೂರ ಠಾಣೆ ಪೊಲೀಸರು ಅವಳಿ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ, ಈ ವೇಳೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಇಬ್ಬರು ಗಾಂಜಾ ಮಾರಾಟಗಾರರ ಬಂಧನ
Keshwapur police arrested two illegal marijuana selling accused in Hubli

By

Published : Mar 27, 2021, 9:35 AM IST

ಹುಬ್ಬಳ್ಳಿ:ಅವಳಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಹುಬ್ಬಳ್ಳಿಯ ಕೇಶ್ವಾಪೂರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ಗಾಂಜಾ

ಸ್ಯಾಮುವೆಲ್ ಏಸು ಬಿಲ್ಲಾ ಮತ್ತು ನವೀನ್​ ಕುಮಾರ್ ಪುರುಷೋತ್ತಮ ಏಸು ಮಾಲಾ ಬಂಧಿತ ಆರೋಪಿಗಳು. ಇವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 250 ಗ್ರಾಂ ತೂಕದ 25 ಸಣ್ಣ ಸಣ್ಣ ಗಾಂಜಾ ಪ್ಯಾಕೆಟ್​​​ಗಳು ಮತ್ತು 290 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೇಶ್ವಾಪೂರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details