ಕರ್ನಾಟಕ

karnataka

By

Published : Dec 29, 2020, 2:39 PM IST

ETV Bharat / state

ಅವಳಿ ‌ನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಅನ್ಯ ಭಾಷೆ ನಾಮಫಲಕಗಳ ತೆರವು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಹಾಗೂ ಕಚೇರಿಗಳಲ್ಲಿ ಕನ್ನಡ ನಾಮಫಲಕ ಬಿಟ್ಟು ಅನ್ಯ ಭಾಷೆ ನಾಮಫಲಕ ಹಾಕಿರುವ ಅಂಗಡಿಗಳ‌ ಮೇಲೆ ದಾಳಿ ನಡೆಸಲಾಯಿತು.

Hubli-Dharwad
ಅನ್ಯ ಭಾಷೆ ನಾಮಫಲಕಗಳ ತೆರವು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಹಾಗೂ ಕಚೇರಿಗಳಲ್ಲಿ ಕನ್ನಡ ನಾಮಫಲಕ ಬಿಟ್ಟು ಅನ್ಯ ಭಾಷೆ ನಾಮಫಲಕ ಹಾಕಿರುವ ಅಂಗಡಿಗಳ‌ ಮೇಲೆ ದಾಳಿ ನಡೆಸಿ ಅಧಿಕಾರಿಗಳು ನಾಮಫಲಕಗಳನ್ನು ತೆರವುಗೊಳಿಸಿದರು.

ಅಂಗಡಿ ಹಾಗೂ ಕಚೇರಿಗಳಲ್ಲಿ ಕನ್ನಡ ನಾಮಫಲಕ ಬಿಟ್ಟು ಅನ್ಯ ಭಾಷೆ ನಾಮಫಲಕ ಹಾಕಿರುವ ಅಂಗಡಿಗಳ‌ ಮೇಲೆ ದಾಳಿ ನಡೆಸಲಾಯಿತು.

ನಗರದ ಗೋಕುಲ್ ರಸ್ತೆ, ಕೊಪ್ಪಿಕರ್ ರಸ್ತೆ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ ಅಧಿಕಾರಿಗಳು ಅಂಗಡಿಗಳ ನಾಮಫಲಕದಲ್ಲಿ ಇಂಗ್ಲಿಷ್ ಸೇರಿದಂತೆ ‌ಬೇರೆ ಬೇರೆ ಭಾಷೆಗಳಲ್ಲಿ ನಾಮಫಲಕ ಹಾಕಲಾಗಿತ್ತು. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಾಕಷ್ಟು ಬಾರಿ‌ ಅಂಗಡಿ‌ ಮಾಲೀಕರಿಗೆ ನೋಟಿಸ್ ನೀಡಿದ್ದರು. ಆದರೂ ನಾಮಫಲಕ‌ ತೆರವು ಮಾಡಿರಲಿಲ್ಲ.

ಹೀಗಾಗಿ, ಇಂದು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ್ ದಂಡಪ್ಪನ್ನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಾಮಫಲಕ ತೆರವು ಮಾಡುವುದರ ಜೊತೆಗೆ ನೋಟಿಸ್ ಜಾರಿ ಮಾಡಿದರು.

ಇನ್ನು ಮುಂದೆ ಕನ್ನಡ ನಾಮಫಲಕ ಕಡ್ಡಾಯ ಮಾಡಲಾಗಿದೆ. ಶೇಕಡಾ 60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

ABOUT THE AUTHOR

...view details