ಕರ್ನಾಟಕ

karnataka

ETV Bharat / state

ಕಾಂಗ್ರೆಸ್ - ಜೆಡಿಎಸ್ ನಡುವೆ ಒತ್ತಾಯದ ಮದುವೆಯಾಗಿದೆ: ಶೆಟ್ಟರ್ ವ್ಯಂಗ್ಯ - congress

ಜೆಡಿಎಸ್​ ಹಾಗೂ ಕಾಂಗ್ರೆಸ್​ ನಡುವೆ ನಡೆದ ಸಮ್ಮಿಶ್ರ ಒಪ್ಪಂದ ಒತ್ತಾಯದ ಮದುವೆಯಾಗಿದೆ. ಹೀಗಾಗಿ ಸಂಸಾರ ಸರಿಯಾಗಿ ನಡೆಯುತ್ತಿಲ್ಲ

ಜಗದೀಶ್​ ಶೆಟ್ಟರ್​

By

Published : Feb 8, 2019, 12:00 AM IST

ಹುಬ್ಬಳ್ಳಿ: ರಾಜ್ಯದಲ್ಲಿ ‌ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒತ್ತಾಯದ ಮದುವೆಯಾಗಿದೆ. ಹೀಗಾಗಿ ಸಂಸಾರ ಸರಿಯಾಗಿ ನಡೆಯುತ್ತಿಲ್ಲವೆಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಮೋದಿ ಆಗಮನದ ಹಿನ್ನೆಲೆಯಲ್ಲಿ ಸ್ಥಳ ವೀಕ್ಷಣೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಜನಾಭಿಪ್ರಾಯದ ವಿರುದ್ಧ ಮೋಸದಿಂದ ಮದುವೆ ಆಗಿದೆ. ಮೈತ್ರಿ ಸರ್ಕಾರಕ್ಕೆ ಸ್ಥಿರತೆ ಇಲ್ಲ. ಕುಮಾರಸ್ವಾಮಿಯನ್ನು ಸಿಎಂ ಎಂದು ಕಾಂಗ್ರೆಸ್‌ನವರು ಮಾನಸಿಕವಾಗಿ ಒಪ್ಪಿಕೊಳುತಿಲ್ಲ ಎಂದರು.

ಕಾಂಗ್ರೆಸಿಗರು ಹೈಕಮಾಂಡ್ ಒತ್ತಡಕ್ಕಾಗಿ ಸುಮ್ಮನಿದ್ದಾರೆ ಅಷ್ಟೇ ಎಂದು ಶೆಟ್ಟರ್​ ಅಭಿಪ್ರಾಯಟ್ಟರು. ದನಕ್ಕೆ ಅತೃಪ್ತ ಶಾಸಕರ ಗೈರುಹಾಜರು ವಿಚಾರವಾಗಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಶಾಸಕರ ಗೈರುಹಾಜರಿಗೆ ಅಸಮಾಧಾನ ಕಾರಣವಾಗಿದೆ. ನಾಳೆಯೂ ಅವರು ಗೈರಾಗಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ವಿನಾಕಾರಣ ಆಪರೇಷನ್ ಕಮಲ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಶಾಸಕರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿ. ಆದರೆ, ಶಾಸಕರನ್ನು ಒತ್ತಾಯಪೂರ್ವಕವಾಗಿ ಹಿಡಿದು ತರಲು ಆಗಲ್ಲವೆಂದು ಶೆಟ್ಟರ್​ ವಾಗ್ದಾಳಿ ನಡೆಸಿದರು.

ABOUT THE AUTHOR

...view details