ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇರುವುದು ಸತ್ಯ; ಎಷ್ಟು ಪರ್ಸೆಂಟು ಅಂತ ಹೇಳಲ್ಲ- ಶೆಟ್ಟರ್ - ಕಿಮ್ಸ್ ವೈದ್ಯರ ನೇಮಕಾತಿ

ಮಾನಸಿಕವಾಗಿ ಬಹುತೇಕರು ನನ್ನೊಂದಿಗೆ ಇದ್ದಾರೆ. ಈಗಾಗಲೇ ಸಾಕಷ್ಟು ಪ್ರಮುಖ ಕಾರ್ಯಕರ್ತರು ನನ್ನೊಂದಿಗೆ ಬಂದಿದ್ದು, ಕೆಲಸ ಶುರು ಮಾಡಿದ್ದಾರೆ. ಜನರ ಆಶೀರ್ವಾದ ನನ್ನ ಮೇಲಿದ್ದು, ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

Belgaum Divisional Media Centre Inauguration
ಬೆಳಗಾವಿ ವಿಭಾಗೀಯ ಮಾಧ್ಯಮ ಕೇಂದ್ರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

By

Published : Apr 20, 2023, 7:30 PM IST

Updated : Apr 20, 2023, 10:10 PM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ: ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಜನರ ಬೆಂಬಲ, ಆಶೀರ್ವಾದ ಕಾಂಗ್ರೆಸ್​​ಗೆ ಇದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಇದೇ ವೇಳೆ, ಶೆಟ್ಟರ್ ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈಶ್ವರಪ್ಪ ಪಕ್ಷದ ಒತ್ತಡದಿಂದ ಆ ರೀತಿ ಹೇಳಿಕೆ ನೀಡಿದ್ದಾರೆ ಎಂದರು. ಬೆಳಗಾವಿ ವಿಭಾಗೀಯ ಮಾಧ್ಯಮ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಾಮಾನ್ಯರು, ಲಿಂಗಾಯತ ಕಮಿಟಿ ಸದಸ್ಯರು ಏನು ಹೇಳ್ತಾರೋ ಅದನ್ನು ಅರ್ಥ ಮಾಡಿಕೊಂಡ್ರೆ ಬಹುಶ: ಆಕ್ರೋಶ ತಣ್ಣಗಾಗುತ್ತದೆ. ಇಲ್ಲದಿದ್ದರೆ ಅದರ ಪರಿಣಾಮ ಬೇರೆಯದ್ದೇ ಆಗಿರುತ್ತದೆ. ಇವತ್ತಿಗೂ ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಂದ ದಿನನಿತ್ಯ ನನಗೆ ದೂರವಾಣಿ ಕರೆಗಳು ಬರ್ತಿವೆ ಎಂದರು.

ನಿಮಗೆ ಎಂಥಾ ಅವಮಾನ ಮಾಡಿದ್ರು. ನಿಮ್ಮಂಥ ಹಿರಿಯರನ್ನು ಕಡೆಗಣಿಸ್ತಾರೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಅಂತ ಹೇಳ್ತಿದಾರೆ. ನಿಮಗೆ ಹಿಂಸೆ ಮಾಡಿದರೆ ನಿಮ್ಮ ವೇದನೆ ಅಲ್ಲ ಸಮಾಜದ ವೇದನೆ. ನಮ್ಮನ್ನು ಉಪಯೋಗ ಮಾಡ್ತಿದ್ದಾರೆ. ಉಪಯೋಗಿಸಿ ಕಸದಂತೆ ಚೆಲ್ಲುತ್ತಿದ್ದಾರೆ ಎಂದು ಬಹಳಷ್ಟು ಜನ ಫೋನ್ ಮಾಡ್ತಾರೆ ಎಂದು ಶೆಟ್ಟರ್ ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ: 40 ಪರ್ಸೆಂಟೇಜ್ ಸರ್ಕಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನೂ ಸರ್ಕಾರದ ಭಾಗವಾಗಿದ್ದೆ. ಅಧಿವೇಶನದಲ್ಲಿ 40 ನಿಮಿಷ ಮಾತ‌ನಾಡಿದ್ದೆ. ಕಿಮ್ಸ್ ವೈದ್ಯರ ನೇಮಕಾತಿ ವಿಚಾರದ ಕುರಿತು ಪ್ರಶ್ನೆ ಮಾಡಿದ್ದೆ. ಭ್ರಷ್ಟಾಚಾರ ಇತ್ಯಾದಿಗಳನ್ನೂ ಪ್ರಸ್ತಾಪಿಸಿದ್ದೇನೆ. ಭ್ರಷ್ಟಾಚಾರ ನಡೆದಿದ್ದು ನಿಜ. ಆದ್ರೆ 40 ಪರ್ಸೆಂಟೋ ಅಥವಾ ಎಷ್ಟು ಪರ್ಸೆಂಟೋ ಎಂಬುದನ್ನು ನಾನು ಹೇಳೋಲ್ಲ. ಅವರು ಹೇಳೋದ್ರಲ್ಲಿ‌ ಅರ್ಥವಿದೆ. ಭ್ರಷ್ಟಾಚಾರ ಇದ್ದೇ ಇದೆ ಎಂದು ಹೇಳಿದರು.

ಮುಸ್ಲಿಂ ಟೋಪಿ ಹಾಕಿಕೊಳ್ಳೋಕೆ ಕಾಂಗ್ರೆಸ್​ಗೆ ಹೋಗಿದ್ದಾರೆಂಬ ಈಶ್ವರಪ್ಪ‌ ಹೇಳಿಕೆಗೆ ಪ್ರತಿಕ್ರಿಯಿಸಿ,
ಅವರವರ ಧರ್ಮದಲ್ಲಿ ಅವರವರ ಪದ್ಧತಿ ಇರುತ್ತೆ. ನಮ್ಮ ಬೆಂಬಲಿಗರನ್ನು ಹಿಡಿದಿಡುವ ಪ್ರಯತ್ನ ನಡೆದಿದೆ. ಆದ್ರೆ ಅವರು ಅಲ್ಲಿ ದೈಹಿಕವಾಗಿದ್ದಾರೆ. ಮಾನಸಿಕವಾಗಿ ನನ್ನ ಜೊತೆ ಇದ್ದಾರೆ. ಖಂಡಿತಾ ನನ್ನ ಜೊತೆ ಬರ್ತಾರೆ. ಚುನಾವಣೆಯಲ್ಲಿ ಗೆಲ್ಲಿಸಲು ಪ್ರಶ್ನಿಸ್ತಾರೆ ಎಂದರು.

ಇವತ್ತು ಮಾನಸಿಕವಾಗಿ ಬಹುತೇಕ ಜನರು ನನ್ನೊಂದಿಗೆ ಇದ್ದಾರೆ. ದೈಹಿಕವಾಗಿ ಅವರ ಮೇಲೆ ಒತ್ತಡ ತಂದು ಆ ವ್ಯವಸ್ಥೆ ತರುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಮುಖ ಕಾರ್ಯಕರ್ತರು ನನ್ನೊಂದಿಗೆ ಬಂದಿದ್ದಾರೆ. ಕೆಲಸವನ್ನು ಕಾರ್ಯಕರ್ತರು ಶುರು ಮಾಡಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಯಾರಿಗೂ ಹೆದರಬೇಕಿಲ್ಲ. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂಓದಿ:ಜಗದೀಶ್ ಶೆಟ್ಟರ್ ಮನೆ ಅಳಿಯ ಆಗಿದ್ದಾರಾ: ಕೆ.ಎಸ್.ಈಶ್ವರಪ್ಪ

Last Updated : Apr 20, 2023, 10:10 PM IST

ABOUT THE AUTHOR

...view details