ಹುಬ್ಬಳ್ಳಿ :ಜಗದೀಶ್ ಶೆಟ್ಟರ್ ನನಗೆ ಬಹಳ ಆತ್ಮೀಯರು, ಹಿರಿಯರು ಅವರೇನೆ ಮಾತನಾಡಿದ್ರು ನಾನು ಸಂತೋಷದಿಂದ ಸ್ವಿಕರಿಸುತ್ತೇನೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶೆಟ್ಟರ್ ವಿರೋಧ ಪಕ್ಷದನಾಯಕರಾಗಬೇಕು ಎನ್ನೋದು ನನ್ನ ಆಸೆ: ಡಿಕೆಶಿ - kannada news
ಜಗದೀಶ್ ಶೆಟ್ಟರ್ ನನಗೆ ಬಹಳ ಆತ್ಮೀಯರು, ಹಿರಿಯರು ಅವರು ಏನೇ ಮಾತನಾಡಿದ್ರು ನಾನು ಸಂತೋಷದಿಂದ ಸ್ವಿಕರಿಸುತ್ತೇನೆಂದು ಡಿಕೆಶಿ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಸಿ ಮಾತನಾಡಿದ ಡಿಕೆಶಿ, ನೂರು ಜನ ಡಿಕೆಶಿ ಬಂದ್ರು ಕುಂದಗೋಳದಲ್ಲಿ ಆಟ ನಡೆಯೋಲ್ಲ ಎಂಬ ಶೆಟ್ಟರ್ ಹೇಳಿಕೆಗೆ ಮಾರ್ಮಿಕವಾಗಿ ತೀರುಗೇಟು ನೀಡಿದರು. ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಅವರೇ ವಿರೋಧ ಪಕ್ಷದನಾಯಕರಾಗಿರಬೇಕು ಎನ್ನೋದು ನನ್ನ ಆಸೆ. ಆದರೆ ಪಕ್ಷವನ್ನೇ ತೊರೆದು, ಬೈದಯ ಹೋದ ಬಿಎಸ್ ಯಡಿಯೂರಪ್ಪ ಅವರನ್ನ ಯಾಕೆ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನ ಮಾಡಿದ್ರು ಎನ್ನುವ ಬಗ್ಗೆ ಶೆಟ್ಟರ್ ಉತ್ತರಿಸಿಲಿ, ಆವಾಗ ನಾನು ಶೆಟ್ಟರ್ ಆರೋಪಕ್ಕೆ ಉತ್ತರ ನೀಡುತ್ತೇನೆ ಎಂದರು.
ಹಣ, ಹೆಂಡ ಹಂಚಿ ಕಾಂಗ್ರೆಸ್ ಚುನಾವಣೆ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಇನ್ಯಾವುದಾದ್ರು ಒಳ್ಳೆಯ ಏಜೆನ್ಸಿ ಇದ್ರೆ ರೇಡ್ ಮಾಡಿಸಲಿ, ಹೆಂಡ ಸಿಕ್ಕರೇ ಬಿಜೆಪಿಯವರೇ ಕುಡಿದು ಪಾರ್ಟಿ ಮಾಡಲಿ ಎಂದು ಕುಟುಕಿದರು.