ಹುಬ್ಬಳ್ಳಿ:ಸುಮಾರು ದಿನಗಳಿಂದ ನಿರೀಕ್ಷೆಯಲ್ಲಿಯೇ ಉಳಿದಿದ್ದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಈಗ ಕಾಲ ಸನ್ನಿಹಿತವಾಗುತ್ತಿದೆ. ಈ ನಿಟ್ಟಿನಲ್ಲಿ ಹು - ಧಾ ಪೊಲೀಸ್ ಕಮೀಷನರೇಟ್ ಕೂಡ ಹಲವಾರು ಸಿದ್ಧತೆ ನಡೆಸಿದ್ದು, ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಪೊಲೀಸ್ ಕಮಿಷನರ್ ಶಾಕ್ ಕೊಟ್ಟಿದ್ದಾರೆ.
ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಬಿಗ್ ಶಾಕ್: ಗಡಿಪಾರಿಗೆ ಕಮಿಷನರೇಟ್ ನಿರ್ಧಾರ...!
ಅವಳಿ ನಗರಗಳಾದ ಹುಬ್ಬಳ್ಳಿ - ಧಾರವಾಡಗಳಲ್ಲಿ ರೌಡಿಗಳನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಇದು ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ರೌಡಿಗಳಿಗೆ ಶಾಕ್ ನೀಡಿದೆ.
ಹೌದು ಈಗಾಗಲೇ ಹು-ಧಾ ಪೊಲೀಸ್ ಕಮಿಷನರ್ ಲಾಭುರಾಮ್ ಸೂಚನೆಯಂತೆ 1,300 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ. ಸುಮಾರು 15ಕ್ಕೂ ಹೆಚ್ಚು ರೌಡಿಗಳು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ ದಾಳಿಯ ಮುಂದುವರಿದ ಭಾಗ ಎನ್ನುವಂತೆ ಪೊಲೀಸರು ಗಡಿಪಾರು ಪ್ಲ್ಯಾನ್ ಮಾಡಿದ್ದಾರೆ. ಈ ಹಿನ್ನೆಲೆ ಪಾಲಿಕೆ ಚುನಾವಣೆಗೆ ತಯಾರಿ ನಡೆಸಿದ್ದ ರೌಡಿಗಳಿಗೆ ಪೊಲೀಸ್ ಕಮಿಷನರ್ ಕ್ರಮ ಶಾಕ್ ನೀಡಿದೆ.
ರೌಡಿಗಳು ಚುನಾವಣೆಗೆ ತಯಾರಿ ನಡೆಸಿದ ಬೆನ್ನಲ್ಲೇ ಪೊಲೀಸ್ ಕಮಿಷನರ್ ಅವರನ್ನು ಗಡಿಪಾರು ಮಾಡುವ ಪ್ಲ್ಯಾನ್ ಮಾಡಿದ್ದು, ಅಕ್ರಮ ಚಟುವಟಿಕೆ ಸೇರಿದಂತೆ ಕೊಲೆ, ಗ್ಯಾಂಬ್ಲಿಂಗ್ ನಲ್ಲಿ ತೊಡಗಿರುವ ರೌಡಿಗಳಿಗೆ ಶಾಕ್ ನೀಡಿದ್ದಾರೆ. ಹೀಗಾಗಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದವರಿಗೆ ನಿರಾಸೆಯಾದಂತಾಗಿದೆ.