ಹುಬ್ಬಳ್ಳಿ:ಹೊಟ್ಟೆ ಉಬ್ಬರ ಹಾಗೂ ನೋವಿನಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಅಪರೂಪದ ಬೃಹದಾಕಾರದ ಗಡ್ಡೆಯನ್ನು, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ವೈದ್ಯರು ಶಸ್ತ್ರ-ಚಿಕಿತ್ಸೆಯ ಮೂಲಕ ಹೂರತೆಗೆದಿದ್ದಾರೆ.
ಮಹಿಳೆ ಹೊಟ್ಟೆಯಲ್ಲಿದ್ದ 9 ಕೆಜಿ ತೂಕದ ಗಡ್ಡೆ ಹೊರ ತೆಗೆದ ಹುಬ್ಬಳ್ಳಿ ವೈದ್ಯರು!!
ಹೊಟ್ಟೆ ಉಬ್ಬುವಿಕೆ ಹಾಗೂ ನೋವಿನಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಅಪರೂಪದ ಬೃಹದಾಕಾರದ ಗಡ್ಡೆಯನ್ನು, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ವೈದ್ಯರು ಶಸ್ತ್ರ-ಚಿಕಿತ್ಸೆಯ ಮೂಲಕ ಹೂರತೆಗೆದಿದ್ದಾರೆ.
ಆಸ್ಪತ್ರೆಯ ಶಸ್ತ್ರ-ಚಿಕಿತ್ಸಾ ತಜ್ಞ ವೈದ್ಯ ಡಾ.ಜಯಪ್ರಭು ಉತ್ತೂರ, ಸತತ ಮೂರು ಘಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 38 ಸೆಂ.ಮಿ ಉದ್ದ 26 ಸೆಂ.ಮಿ ಅಗಲ ಹಾಗೂ 9 ಕೆಜಿ ತೂಕವಿರುವ ಮಾಂಸದ ಗಡ್ಡೆಯನ್ನು ಹೂಟ್ಟೆಯಿಂದ ಹೂರತೆಗೆಯವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಹಿಳೆಯಲ್ಲಿ “ಸೈಟಸ್ ಇನವರ್ಸಸ್ ಟೂಟ್ಯಾಲಿಸ್” ಎಂಬ ಬೆಳವಣೆಗೆಯ ಸಮಸ್ಯೆ ಸ್ಕ್ಯಾನಿಂಗ್ ನಂತರ ಕಂಡು ಬಂದಿದ್ದು, ಅತ್ಯಂತ ವಿರಳಾತೀತವಾದ ವೈದ್ಯಕೀಯ ಸ್ಥಿತಿ ಎಂಬುದನ್ನು ಡಾ. ಜಯಪ್ರಭು ಉತ್ತೂರ ತಿಳಿಸಿದರು. ಇನ್ನೂ ಅರವಳಿಕೆ ತಜ್ಞರಾದ ಡಾ.ತೇಜಸ ಕುಲಕರ್ಣಿ ಹಾಗೂ ಡಾ. ಸಾಗರ ಕೂಳ್ಳಿ ಮತ್ತು ಸಹಾಯಕ ತಂಡದ ಸದಸ್ಯರಿಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ ವಿಶಾಖಾ ಮಧುರಕರ ಅಭಿನಂದನೆ ಸಲ್ಲಿಸಿದ್ದಾರೆ.