ಕರ್ನಾಟಕ

karnataka

ETV Bharat / state

ಅಲ್ಪ ಅವಧಿಯಲ್ಲಿಯೇ ಮಹತ್ತರ ದಾಖಲೆ ಬರೆದ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ - heritage train museum

ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿರುವ ರೈಲು ಮ್ಯೂಸಿಯಂ ಉತ್ತರ ಕರ್ನಾಟಕದ ಮೊದಲ ರೈಲು ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮೈಸೂರು ಹೊರತುಪಡಿಸಿದರೆ ನೈರುತ್ಯ ರೈಲ್ವೆ ವಲಯದ ಎರಡನೇ ಮ್ಯೂಸಿಯಂ ಇದಾಗಿದೆ. ಈ ಮ್ಯೂಸಿಯಂ ಅಲ್ಪಾವಧಿಯಲ್ಲೆ ಇದೀಗ ಅತ್ಯಾಕರ್ಷಕ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ.

Hubballi Railway Museum is a great record in a short period of time
ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ

By

Published : Dec 2, 2020, 4:19 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಕೈಕ ರೈಲ್ವೆ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಆರಂಭವಾಗಿ ಮೂರು ತಿಂಗಳಲ್ಲಿಯೇ ಮಹತ್ತರ ದಾಖಲೆ ಬರೆದಿದೆ.

ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ

ರೈಲ್ವೆ ಇಲಾಖೆಯ ನಡೆದು ಬಂದ ಹಾದಿಯನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಹಾಗೂ ರೈಲ್ವೆಯ ಐತಿಹಾಸಿಕ ಗತವೈಭವ ಸಾರುವ ಉದ್ದೇಶ ಹೊಂದಿದೆ. 186 ವರ್ಷಗಳ ಇತಿಹಾಸ ಹೊಂದಿರುವ ರೈಲ್ವೆ ಕಾಲಕ್ರಮೇಣ ಕಂಡ ಬದಲಾವಣೆಗಳು, ಬಂದ ಹೊಸತನಗಳ ಬಗ್ಗೆ ವಸ್ತು ಸಂಗ್ರಹಾಲಯದಲ್ಲಿ ಮಾಹಿತಿ ದಾಖಲಿಸಲಾಗಿದೆ. ಈ ರೈಲ್ವೆ ವಸ್ತು ಸಂಗ್ರಹಾಲಯ ಆರಂಭವಾಗಿ ಮೂರು ತಿಂಗಳು ಕಳೆದಿದ್ದು, ಈ ಅಲ್ಪ ಸಮಯದಲ್ಲಿಯೇ 24 ಸಾವಿರ ಜನರು ವೀಕ್ಷಣೆ ಮಾಡಿದ್ದಾರೆ. ಆಗಸ್ಟ್‌ನಲ್ಲಿ 2,683 ಜನ ವೀಕ್ಷಿಸಿದ್ದರು. ಇದುವರೆಗೆ ಭೇಟಿ ನೀಡಿದವರಲ್ಲಿ ಸುಮಾರು ಐದು ಸಾವಿರ ಜನ ಮಕ್ಕಳೇ ಇರುವುದು ಮತ್ತೊಂದು ವಿಶೇಷ.

ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ

ನಿತ್ಯ 140ರಿಂದ 150 ಜನ ವಸ್ತು ಸಂಗ್ರಹಾಲಯಕ್ಕೆ ಬರುತ್ತಿದ್ದು, ವಾರಾಂತ್ಯದಲ್ಲಿ ದಿನವೊಂದಕ್ಕೆ 400 ಜನ ಬರುತ್ತಿದ್ದಾರೆ. ಆಗಸ್ಟ್​​​ನಲ್ಲಿ 2,683 ಜನ ಭೇಟಿ ನೀಡಿದ್ದು, 1,373 ಜನ ಸಣ್ಣ ರೈಲಿನಲ್ಲಿ ಸಂಚರಿಸಿದ್ದಾರೆ. ನವೆಂಬರ್​ನಲ್ಲಿ 6,628 ಜನ ಭೇಟಿ ನೀಡಿದ್ದಾರೆ. ಈ ವಸ್ತು ಸಂಗ್ರಹಾಲಯ ಮಧ್ಯಾಹ್ನ 12ರಿಂದ ಸಂಜೆ 7 ಗಂಟೆ ತನಕ, ವಾರಾಂತ್ಯದಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.

ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ

ಇದನ್ನೂ ಓದಿ: ಮೈಸೂರು ರೈಲು ನಿಲ್ದಾಣಕ್ಕೆ ಬಂದ 'ಕಾಮನ್​ ಮ್ಯಾನ್​'... ಹೊಸ ಆಕರ್ಷಣೆಯಾದ ಆರ್​.ಕೆ. ಲಕ್ಷ್ಮಣ್​ ಕಲಾಕೃತಿ

ಐದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. ಪ್ರತಿ ಸೋಮವಾರ ರಜೆ ನಿಗದಿಪಡಿಸಿದ್ದು, ಹುಬ್ಬಳ್ಳಿ ಜನತೆಗೆ ಮಾತ್ರವಲ್ಲದೇ ಉತ್ತರ ಕರ್ನಾಟಕದ ಪ್ರವಾಸಿಗರಿಗೂ ಈ ತಾಣ ಕೈಬೀಸಿ ಕರೆಯುತ್ತಿದೆ. ಉತ್ತರ ಕರ್ನಾಟಕದ ಮೊದಲ ರೈಲ್ವೆ ಮ್ಯೂಸಿಯಂ ಎಂಬ ಹೆಗ್ಗಳಿಕೆ ಪಡೆದಿರುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಮುಂಬರುವ ದಿನಗಳಲ್ಲಿ ಮತ್ತಷ್ಟು‌ ಜನಮನ್ನಣೆ ಪಡೆಯುವ ಸಾಧ್ಯತೆ ಹೆಚ್ಚಿವೆ.

ಐತಿಹಾಸಿಕ ಕಥೆ ಹೇಳುವ ಹುಬ್ಬಳ್ಳಿಯ ಪಾರಂಪರಿಕ ರೈಲು ವಸ್ತು ಸಂಗ್ರಹಾಲಯ

ABOUT THE AUTHOR

...view details