ಕಲಘಟಗಿ:ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲಿ ಸಂಭ್ರಮ ಕಂಡು ಬಂದಿದೆ. ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಮಹಾದೇವಿ ನಾಯ್ಕರ್ ಎಂಬ ಗೃಹಿಣಿ ತಮ್ಮ 46ನೇ ವಯಸ್ಸಿನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.
46ನೇ ವಯಸ್ಸಿಗೆ ಎಸ್ಸೆಸ್ಸೆಲ್ಸಿ ಪಾಸ್ ಮಾಡಿದ ಗೃಹಿಣಿ ಮಹಾದೇವಿ - homemaker Mahadevi Naikar completed SSLC exam
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಮಹಾದೇವಿ ನಾಯ್ಕರ್ ಎಂಬ ಗೃಹಿಣಿ ತಮ್ಮ 46ನೇ ವಯಸ್ಸಿನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
ಮಹಾದೇವಿ ನಾಯ್ಕರ್
1985ರಲ್ಲಿ ಮಹಾದೇವಿ ನಾಯ್ಕರ್ ಅವರು ಬಡತನದ ಸಂಕಷ್ಟದಲ್ಲಿ ಸಿಲುಕಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಕನಸನ್ನು ಕೈ ಚೆಲ್ಲಿದ್ದರು. ಆದರೆ ಇದೀಗ ಪರೀಕ್ಷೆ ಬರೆದ ಅವರು 'ಸಿ' ಗ್ರೇಡ್ನಲ್ಲಿ ಪಾಸ್ ಆಗಿದ್ದಾರೆ.
ಮಹಾದೇವಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸ್ ಮಾಡಿದ್ದಕ್ಕೆ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಕಾಲೇಜು ಮೆಟ್ಟಿಲೇರುವ ಕನಸಿನ ಆಸೆಯೂ ಸಹ ಚಿಗುರೊಡೆದಿದೆ.