ಹುಬ್ಬಳ್ಳಿ:ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹೋಟೆಲ್ಗೆ ನೀರು ನುಗ್ಗಿ ಅಪಾರ ಪ್ರಮಾಣದ ದಿನಸಿ ವಸ್ತುಗಳ ಹಾನಿಯಾಗಿರುವ ಘಟನೆ ದೇಶಪಾಂಡೆ ನಗರದಲ್ಲಿ ನಡೆದಿದೆ.
ಹೋಟೆಲ್ ಮಾಲೀಕರು ಕಳೆದ 10 ವರ್ಷಗಳಿಂದ ಇಂತಹ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಸರಾಗವಾಗಿ ಮಳೆ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರತಿ ಸಾರಿ ಮಳೆ ಸಂಕಷ್ಟಪಡುವಂತಾಗಿದೆ.
ಹುಬ್ಬಳ್ಳಿಯಲ್ಲಿ ಮಳೆ ಅವಾಂತರ ಈ ಸಮಸ್ಯೆ ಬಗ್ಗೆ ಅನೇಕ ಬಾರಿ ಪಾಲಿಕೆ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ. ಇನ್ನು ಕೊರೊನಾ ಸಂದರ್ಭದಲ್ಲಿ ನಾಲ್ಕು ತಿಂಗಳಿಂದ ವ್ಯಾಪಾರ ಇಲ್ಲದೇ ಪರದಾಟ ನಡೆಸಿದ್ದರು. ಆದ್ರೆ ಈಗ ಲಾಕ್ಡೌನ್ ಆದೇಶ ಹಿಂಪಡೆದ ಸರಕಾರ ಹೋಟೆಲ್ ನಡೆಸಲು ಅವಕಾಶ ನೀಡಿದೆ. ಇನ್ನಾದರೂ ಉತ್ತಮ ವ್ಯಾಪಾರ ನಡೆಸಬೇಕು ಅಂದುಕೊಂಡ ಹೊಟೇಲ್ ಮಾಲೀಕರಿಗೆ ಮಳೆ ಆಘಾತ ನೀಡಿದೆ. ಮಳೆ ಅವಾಂತರದಿಂದ ಸುಮಾರು 50000ಕ್ಕೂ ಅಧಿಕ ನಷ್ಟವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಇದೇ ರೀತಿ ನಗರದ ಗಬ್ಬೂರ ಕ್ರಾಸ್ ರಿಲಯನ್ಸ್ ಮಾರ್ಕೆಟ್ ಬಳಿ ಇರುವ ಸಣ್ಣ ಹೋಟೆಲ್ಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ವೀರಭದ್ರಪ್ಪ ಪಟ್ಟಣಶೆಟ್ಟಿ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.