ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಮಳೆಯ ಆರ್ಭಟ: ಜಲ ಸಂಕಷ್ಟಕ್ಕೆ ತುತ್ತಾದ ಮೂರು ಸಾವಿರ ಮಠ!

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹುಬ್ಬಳ್ಳಿ ನಗರ ನಲುಗಿ ಹೋಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By

Published : Aug 8, 2019, 10:36 PM IST

ಧಾರಾಕಾರ ಮಳೆಗೆ ನಲುಗಿ ಹೋದ ಹುಬ್ಬಳ್ಳಿ

ಹುಬ್ಬಳ್ಳಿ:ರಾಜ್ಯಾದ್ಯಂತ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯ ಅಬ್ಬರಕ್ಕೆ ಹುಬ್ಬಳ್ಳಿ ನಗರವು ಜಲಸಂಕಷ್ಟಕ್ಕೆ ತುತ್ತಾಗಿದೆ.

ಉತ್ತರ ಕರ್ನಾಟಕದ ಪ್ರಖ್ಯಾತ ಮೂರು ಸಾವಿರ ಮಠದ ಕರ್ತೃ ಗದ್ದುಗೆಗೆ ಇದೇ ಮೊದಲ ಬಾರಿಗೆ ನೀರು ನುಗ್ಗಿದೆ. ಮಠದೊಳಗೆ ನಿಂತಿರುವ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಗಿದೆ. ಆದರೆ ನೀರಿನ ನಡುವೆಯೂ ಕೂಡ ಅರ್ಚಕರು ಗದ್ದುಗೆಗೆ ‌ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ.

ಧಾರಾಕಾರ ಮಳೆಗೆ ನಲುಗಿ ಹೋದ ಹುಬ್ಬಳ್ಳಿ

ಇನ್ನು ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಪಕ್ಕದಲ್ಲಿರುವ ಬೃಹತ್ ಮರವೊಂದು ಸಾರಿಗೆ ಬಸ್​ ಮೇಲೆ ಬಿದ್ದಿದೆ. ಪರಿಣಾಮ ಬಸ್​​​ನ ಮೇಲ್ಭಾಗ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್​ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಬಳಿಕ ಪಾಲಿಕೆ ಸಿಬ್ಬಂದಿ ಆಗಮಿಸಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಹುಬ್ಬಳ್ಳಿಯ ಇಂದಿರಾ ನಗರದಲ್ಲೆಡೆ ನೀರು ತುಂಬಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಇನ್ನು ಅತಿವೃಷ್ಟಿ ಪ್ರದೇಶಗಳಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವಲಗುಂದ ವಿಧಾನಸಭಾ ಕ್ಷೇತ್ರದ ಬೆಣ್ಣೆ ಹಳ್ಳದಲ್ಲಿ ಪ್ರವಾಹದಿಂದ ಬೆಳೆಗಳು ಕೊಚ್ಚಿ ಹೋಗಿದ್ದು, ಜಮೀನುಗಳು ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಗದೀಶ್ ಶೆಟ್ಟರ್ ಆದಷ್ಟು ಬೇಗ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು.

ABOUT THE AUTHOR

...view details