ಧಾರವಾಡ:ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಜಿಲ್ಲೆಯ ಅಳ್ನಾವರ ತಾಲೂಕು ಬೆಣಚಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹುಲಿಕೆರೆಯಿಂದ ಭಾರಿ ಪ್ರಮಾಣದ ನೀರು ಹೊರ ಹೋಗುತ್ತಿರುವುದರಿಂದ ಅಳ್ನಾವರ ಪಟ್ಟಣ ಜಲಾವೃತಗೊಂಡಿದೆ.
ಧಾರವಾಡದಲ್ಲಿ ನಿಲ್ಲದ ವರುಣನ ಆರ್ಭಟ: ಗ್ರಾಮಗಳು ಜಲಾವೃತ, ಮನೆಗಳು ಕುಸಿತ ನವಲಗುಂದ ತಾಲೂಕಿನ ಬೆಣ್ಣಿಹಳ್ಳ-ತುಪ್ಪರಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುನ್ನೆಚ್ಚರಿಕ ಕ್ರಮವಾಗಿ ತಾಲೂಕಿನ ಅರೆಕುರಹಟ್ಟಿಯಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ.
ಸುಮಾರು 10ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿದ್ದು, ಧಾರವಾಡದ ಕಮಲಾಪುರದಲ್ಲಿ 1, ಲಖಮಾಪೂರ ಗ್ರಾಮದಲ್ಲಿ 3, ಯಾದವಾಡದಲ್ಲಿ 4 ಹಾಗೂ ಸಲಕಿನಕೊಪ್ಪ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಲವೆಡೆ ಮನೆಗಳು ಕುಸಿದಿವೆ.