ಹುಬ್ಬಳ್ಳಿ: ಸಂಡೇ ಲಾಕ್‌ಡೌನ್ ವೇಳೆ ಮಾಂಸ ಮಾರಾಟಕ್ಕೆ ಅನುಮತಿ ಇದ್ದರೂ ಗ್ರಾಹಕರಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಅವಶ್ಯಕ ವಸ್ತುಗಳ ವಹಿವಾಟು ಬಿಟ್ಟು ಜಿಲ್ಲೆ ಸಂಪೂರ್ಣ ಬಂದ್ ಆಗಿದೆ.
ಹುಬ್ಬಳ್ಳಿ: ಲಾಕ್‌ಡೌನ್ ವೇಳೆ ಮಾಂಸ ಮಾರಾಟಕ್ಕೆ ಅನುಮತಿಸಿದರೂ ಗ್ರಾಹಕರಿಲ್ಲ - ಹುಬ್ಬಳ್ಳಿ ಸಂಡೇ ಲಾಕ್ ಡೌನ್ ಸುದ್ದಿ
ಅವಶ್ಯಕ ವಸ್ತುಗಳ ವಹಿವಾಟು ಹೊರತುಪಡಿಸಿ ಜಿಲ್ಲೆಯಲ್ಲಿ ಲಾಕ್‌ಡೌನ್ ಸಂಪೂರ್ಣವಾಗಿ ಜಾರಿಯಲ್ಲಿದೆ. ಈ ಮಧ್ಯೆ, ಮಾಂಸದಂಗಡಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರಿಲ್ಲದೆ ವಾತಾವರಣ ಬಿಕೋ ಎನ್ನುತ್ತಿತ್ತು.
ವಾಣಿಜ್ಯ ನಗರಿ ಸಂಪೂರ್ಣ ಸ್ತಬ್ಧ
ನಗರದಲ್ಲಿ ಬೆಳಗ್ಗೆಯಿಂದಲೇ ಪೊಲೀಸರು ಗಸ್ತು ತಿರುಗುತ್ತಿರುವುದು ಕಂಡುಬಂತು. ಹಾಲು, ಔಷಧ ಸೇರಿ ಇನ್ನಿತರ ಅವಶ್ಯಕ ವಸ್ತುಗಳ ವಾಹನಗಳ ಸಾಗಾಟ ಹೊರತುಪಡಿಸಿ ಉಳಿದ ವಾಹನಗಳು ರಸ್ತೆಗಿಳಿದಿಲ್ಲ. ಬಸ್ ಸಂಚಾರ, ಅಂಗಡಿಗಳು ತೆರೆದಿಲ್ಲ. ಜನರಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ.
ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರು ಅನವಶ್ಯಕವಾಗಿ ಓಡಾಟ ನಡೆಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.