ಧಾರವಾಡ: ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ಗಣೇಶನ ಹಬ್ಬಕ್ಕೆ ಈ ಬಾರಿ ಕರಿನೆರಳು ಆವರಿಸಿಕೊಂಡಿದೆ. ಈ ಬಾರಿ ಸರಳವಾಗಿ ವಿನಾಯಕನ ಹಬ್ಬವನ್ನು ಆಚರಿಸಲಾಗುತ್ತಿದೆ.
ಧಾರವಾಡದ ಸುಭಾಷ್ ರಸ್ತೆಯ ವ್ಯಾಪಾರಿಗಳು ಪ್ರತಿವರ್ಷ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಸರ್ಕಾರ ಸರಳವಾಗಿ ಆಚರಣೆ ಮಾಡಲು ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆ, ಸರಳವಾಗಿ ಹಬ್ಬ ಆಚರಣೆ ಮಾಡಿದ್ದಾರೆ.
ಧಾರವಾಡದಲ್ಲಿ ಕ್ಯಾಂಟರ್ ವಾಹನದಲ್ಲಿ ಗಣೇಶ ಪ್ರತಿಷ್ಠಾಪನೆ ದೊಡ್ಡ ಮಂಟಪದಲ್ಲಿ ಕೂಡಿಸಲಾಗುತ್ತಿದ್ದ ಸಾರ್ವಜನಿಕ ಗಣೇಶ ಮೂರ್ತಿಯನ್ನು, ಈ ಬಾರಿ ಒಂದು ಕ್ಯಾಂಟರ್ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಾಗೂ ಇಂದು ರಾತ್ರಿಯೇ ನಿಮಜ್ಜನ ಮಾಡಲು ಮಂಡಳಿಯವರು ತೀರ್ಮಾನಿಸಿದ್ದಾರೆ.
ಕಳೆದ ವರ್ಷ ಏಳು ದಿನಗಳ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಿ, ಪ್ರತಿ ದಿನವೂ ಒಂದೊಂದು ವಿಶೇಷ ಕಾರ್ಯಕ್ರಮ ಆಯೋಜಿಸಿ ಪ್ರಸಾದ ವ್ಯವಸ್ಥೆ ಮಾಡಿ ನಿಮಜ್ಜನ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ವ್ಯಾಪಾರದಲ್ಲಿ ಕುಂಠಿತವಾಗಿದ್ದು, ಆ ಒಂದು ಕಾರಣದಿಂದ ಸರಳವಾಗಿ ಆಚರಣೆ ಮಾಡುತ್ತಿದ್ದಾರೆ.