ಕರ್ನಾಟಕ

karnataka

ವಿಆರ್​ಎಲ್​ ಬಸ್​ ಡಿಪೋದಲ್ಲಿ ಅಗ್ನಿ ಅವಘಡ: ಆಕಾಶದೆತ್ತರಕ್ಕೆ ಚಾಚಿದ ಹೊಗೆ

By

Published : Jun 21, 2019, 9:33 PM IST

ಕೆಟ್ಟ ವಾಹನಗಳನ್ನು ರಿಪೇರಿ ಮಾಡುವಾಗ ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹುಬ್ಬಳ್ಳಿಯ ಹೊರವಲಯದಲ್ಲಿರುವ ವಿಆರ್​​ಎಲ್​ ಬಸ್​ ಡಿಪೋದಲ್ಲಿ ಭಾರಿ ಅಗ್ನಿ ಸಂಭವಿಸಿದೆ. ಬೆಂಕಿ ಕೆನ್ನಾಲಿಗೆ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹೊತ್ತಿಕೊಂಡು ಭಾರಿ ಅನಾಹುತ ನಡೆದಿದೆ.

ವಿಆರ್​ಎಲ್​ ಬಸ್​ ಡಿಪೋದಲ್ಲಿ ಆಕಸ್ಮಿಕ ಬೆಂಕಿ

ಹುಬ್ಬಳ್ಳಿ: ವಿಆರ್​ಎಲ್‌ ಸಂಸ್ಥೆಯ ಬಸ್ ಡಿಪೋದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ನಗರದ ಹೊರವಲಯದಲ್ಲಿರುವ ವಿಆರ್​ಎಲ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಟ್ಟ ವಾಹನಗಳನ್ನು ರಿಪೇರಿ ಮಾಡುವಾಗ ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಬೆಂಕಿಯ ಕೆನ್ನಾಲಿಗೆ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹರಡಿಕೊಂಡು ಭಾರಿ ಅನಾಹುತ ಸಂಭವಿಸಿದೆ.

ವಿಆರ್​ಎಲ್​ ಬಸ್​ ಡಿಪೋದಲ್ಲಿ ಅಗ್ನಿ ಅವಘಡ

ಬೆಂಕಿ ಹತ್ತಿದ ಪರಿಣಾಮ ಆಗಸದೆತ್ತರಕ್ಕೆ ಹೊಗೆ ಆವರಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿತ್ತು‌‌. ವಿಷಯ ತಿಳಿದ ಅಗ್ನಿ ಶಾಮಕ
ದಳ ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಕೆಲ ಲಾರಿ ಹಾಗೂ ಬಸ್​ಗಳು ಸುಟ್ಟುಹೋಗಿವೆ ಎನ್ನಲಾಗ್ತಿದೆ.

For All Latest Updates

TAGGED:

Av

ABOUT THE AUTHOR

...view details