ಧಾರವಾಡ :ದೇವರಿಗೆ ಹಚ್ಚಿಟ್ಟ ದೀಪಕ್ಕೆ ಬಟ್ಟೆ ತಗುಲಿ ಮನೆಯೊಂದು ಹೊತ್ತಿ ಉರಿದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ದೇವರಿಗೆ ಹಚ್ಚಿಟ್ಟ ದೀಪದಿಂದ ಹೊತ್ತಿ ಉರಿದ ಮನೆ - cylinder blast
ಹಬ್ಬದ ಸಂಭ್ರಮದಲ್ಲಿ ದೇವರ ಮನೆಯಲ್ಲಿ ದೇವರಿಗೆ ಹಚ್ಚಿಟ್ಟ ದೀಪಕ್ಕೆ ಬಟ್ಟೆತಾಗಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಸದ್ಯ ಅಗ್ನಿ ಅವಘಡದಲ್ಲಿ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಘ್ನಿಅವಗಡದಿಂದ ಹೊತ್ತಿ ಉರಿದ ಮನೆ
ನರೇಂದ್ರ ಗ್ರಾಮದ ಶಂಕ್ರಪ್ಪ ಗಾಣಿಗೇರ ಎಂಬುವವರಿಗೆ ಸೇರಿದ ಮನೆ ಈ ಅವಘಡ ಸಂಭವಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂಕಿ ಕೆನ್ನಾಲಿಗೆ ಮಧ್ಯೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಿಂದ ಹೊರ ಬಂದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.