ಹುಬ್ಬಳ್ಳಿ:ಕೋವಿಡ್ ವಿರುದ್ಧ ಹಲವಾರು ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅಂತೆಯೇ ಮಾಜಿ ಹೋಮ್ಗಾರ್ಡ್ರೊಬ್ಬರು ಈ ಕೊರೊನಾ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಕೊರೊನಾ ವಿರುದ್ಧ ಹೋರಾಟ: ಮಾಜಿ ಹೋಂಗಾರ್ಡ್ ನಿಸ್ವಾರ್ಥ ಸೇವೆ
ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಪ್ರಕಾಶ ಮೇಟಿ ಎಂಬುವವರು, ಕೋವಿಡ್-19 ವಿರುದ್ಧ ಹೋರಾಡುವ ಸಲುವಾಗಿ ವಿಶಿಷ್ಟ ಸೇವೆ ಸಲಿಸುತ್ತಿದ್ದಾರೆ.
ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಪ್ರಕಾಶ ಮೇಟಿ ಎಂಬುವರೇ ವಿಶಿಷ್ಟ ಸೇವೆ ಸಲಿಸುತ್ತಿರುವವರು. ಪ್ರಕಾಶ ಅವರು ಕಳೆದ ಕೆಲವು ವರ್ಷಗಳಿಂದ ಹೋಮ್ಗಾರ್ಡ್ ಆಗಿ ಉತ್ತಮ ಸೇವೆ ಸಲ್ಲಿಸಿ, ಈಗ ಕೆಲಸ ಬಿಟ್ಟು ಕೃಷಿಕರಾಗಿದ್ದಾರೆ.
ಹಾಲಿ ಕರ್ತವ್ಯದಲ್ಲಿ ಇರದಿದ್ದರೂ ನಿತ್ಯ ಸ್ವಯಂಪ್ರೇರಣೆಯಿಂದ ಕಲಘಟಗಿ ಠಾಣೆಗೆ ಆಗಮಿಸುವ ಪ್ರಕಾಶ ಅವರು, ಠಾಣಾಧಿಕಾರಿ ಸೂಚಿಸಿರುವ ಜಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕಲಘಟಗಿ ಠಾಣಾ ಇನ್ಸ್ಪೆಕ್ಟರ್ ವಿಜಯ ಬಿರಾದಾರ ತಿಳಿಸಿದ್ದಾರೆ.