ಹುಬ್ಬಳ್ಳಿ:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ಹೊಡೆದಾಡಿಕೊಂಡು ಒಬ್ಬ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಹೊಡೆದಾಟ; ಓರ್ವನಿಗೆ ಚಾಕು ಇರಿತ - ಗಂಭೀರ
ಹುಸೇನ್ ಬಿಜಾಪುರ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಗೊಂಡಿರುವ ಹುಸೇನ್ ಬಿಜಾಪುರ
ಘಟನೆಯಲ್ಲಿ ಹುಸೇನ್ ಬಿಜಾಪುರ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡಿರುವ ಹುಸೇನ್ ಬಿಜಾಪುರ ನಗರದ ಸೆಟ್ಲಮೆಂಟ್ ನಿವಾಸಿಯಾಗಿದ್ದು, ನೇಕಾರ ನಗರದ ಯುವಕರು ಹಳೇ ವೈಷಮ್ಯದಿಂದ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಸೂರಿ, ಗಿರಿ, ಸತೀಶ ಸೇರಿದಂತೆ 25 ಕ್ಕೂ ಹೆಚ್ಚು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.