ಕರ್ನಾಟಕ

karnataka

ETV Bharat / state

ಮಗನಿಗೆ ಬ್ಲ್ಯಾಕ್ ಫಂಗಸ್ ಆಗಿದೆ, ದಯವಿಟ್ಟು ಔಷಧಿ ಕೊಡಿಸಿ: ಸಚಿವ ಸುಧಾಕರ್ ಮುಂದೆ ಕಣ್ಣೀರಿಟ್ಟ ವ್ಯಕ್ತಿ

ಬ್ಲ್ಯಾಕ್ ಫಂಗಸ್​ಗೆ ತುತ್ತಾಗಿರುವ ಮಗನಿಗೆ ಚಿಕಿತ್ಸೆ ಕೊಡಿಸುವಂತೆ ವ್ಯಕ್ತಿಯೊಬ್ಬರು ಆರೋಗ್ಯ ಸಚಿವರ ಮುಂದೆ ಕಣ್ಣೀರು ಹಾಕಿದರು. ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ.

Father request to health Minister for his son treatment
ಸಚಿವರ ಮುಂದೆ ಅಳಲು ತೋಡಿಕೊಂಡ ವ್ಯಕ್ತಿ

By

Published : May 22, 2021, 2:16 PM IST

Updated : May 22, 2021, 2:23 PM IST

ಹುಬ್ಬಳ್ಳಿ :ತನ್ನ ಮಗ ಬ್ಲ್ಯಾಕ್ ಫಂಗಸ್​ಗೆ ಒಳಗಾಗಿದ್ದು, ಸಮರ್ಪಕವಾದ ಔಷಧಿ ಸಿಗುತ್ತಿಲ್ಲ. ದಯವಿಟ್ಟು ಮಗನಿಗೆ ಔಷಧಿ ಕೊಡಿಸಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮುಂದೆ ಬಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.

ಸಚಿವ ಸುಧಾಕರ್ ಕಿಮ್ಸ್ ಆಸ್ಪತ್ರೆಗೆ ಬರುವಾಗ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಜಗದೀಶ ಗೌಡ ಪಾಟೀಲ ಎಂಬವರು ತಮ್ಮ ಸಂಕಷ್ಟ ತೋಡಿಕೊಂಡು ಕಣ್ಣೀರು ಹಾಕಿದರು.

ಸಚಿವರ ಮುಂದೆ ಅಳಲು ತೋಡಿಕೊಂಡ ವ್ಯಕ್ತಿ

ಓದಿ : ಬಡ ಕಾರ್ಮಿಕ ವರ್ಗಕ್ಕೆ ಮತ್ತೆ ಲಾಕ್​ಡೌನ್ ಬಿಸಿ.. ಬದುಕು ದುಸ್ತರ

ವ್ಯಕ್ತಿಯ ಅಮಸ್ಯೆ ಆಲಿಸಿದ ಸಚಿವರು, ಔಷಧಿ ಸಿಗುತ್ತೆ ಅಳಬೇಡಿ ಎಂದು ಸಮಾಧಾನ ಪಡಿಸಿದರು. ಅವರ ಮೊಬೈಲ್ ನಂಬರ್ ಹಾಗೂ ವಿಳಾಸ ಪಡೆದುಕೊಂಡು ಅಲ್ಲಿಂದ ತೆರಳಿದರು.

Last Updated : May 22, 2021, 2:23 PM IST

ABOUT THE AUTHOR

...view details