ಕರ್ನಾಟಕ

karnataka

ETV Bharat / state

ರೈತ ಹುತಾತ್ಮ‌ ದಿನಾಚರಣೆ:ನವಲಗುಂದದಲ್ಲಿ ಪ್ರತಿಭಟನಾ ರ‍್ಯಾಲಿ - etv bharat

ರೈತ ಹುತಾತ್ಮ ದಿನಾಚರಣೆ ಅಂಗವಾಗಿ‌ ನವಲಗುಂದ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.‌ ಪಟ್ಟಣದಲ್ಲಿರುವ ರೈತ ಹುತಾತ್ಮ ಸ್ಮಾರಕಕ್ಕೆ ರೈತ ಮುಖಂಡರು ಮತ್ತು ಸಾರ್ವಜನಿಕರು ಪುಷ್ಪ ನಮನ ಸಲ್ಲಿಸಿದರು.

ರೈತ ಹುತಾತ್ಮ‌ ದಿನಾಚರಣೆ:ನವಲಗುಂದದಲ್ಲಿ ಪ್ರತಿಭಟನಾ ರ‍್ಯಾಲಿ

By

Published : Jul 21, 2019, 4:51 PM IST

ಧಾರವಾಡ:ನವಲಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರೈತರುರ‍್ಯಾಲಿಯುದ್ದಕ್ಕೂ ರಾಜ್ಯದ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಹುತಾತ್ಮ‌ ದಿನಾಚರಣೆ:ನವಲಗುಂದದಲ್ಲಿ ಪ್ರತಿಭಟನಾ ರ‍್ಯಾಲಿ

ಕಳಸಾ ಬಂಡೂರಿ ನಾಲೆಯಿಂದ ಮಲಪ್ರಭಾ ನದಿಗೆ ತಕ್ಷಣ ನೀರು ಹರಿಸಲು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು ಹಾಗೂ ಹೋರಾಟಗಾರರ ಮೇಲೆ ಪೊಲೀಸರು ಹಾಕಿರುವ ಕೇಸ್​ಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಈ ಬೇಡಿಕೆಗಳನ್ನು ಆಗಸ್ಟ್ ರೊಳಗಾಗಿ ಈಡೇರಿಸದಿದ್ದರೆ ಅಗಸ್ಟ್ 3ರಂದು ನವಲಗುಂದ ಪಟ್ಟಣದ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಿ ಉಗ್ರ ಹೋರಾಟ ಮಾಡವುದಾಗಿ ಎಚ್ಚರಿಸಿದರು.

ABOUT THE AUTHOR

...view details