ಧಾರವಾಡ: ನಾಳೆ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ಧಾರವಾಡದಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಅಯೋಧ್ಯೆ ಭೂಮಿ ಪೂಜೆ: ಮದ್ಯ ಮಾರಾಟಕ್ಕೆ ನಿಷೇಧ, ಡ್ರೈ ಡೇ ಘೋಷಿಸಿದ ಧಾರವಾಡ ಜಿಲ್ಲಾಡಳಿತ - ಮದ್ಯ ಮಾರಾಟ ನಿಷೇಧ
ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಾಳೆ ನಡೆಯುತ್ತಿರುವ ಭೂಮಿ ಪೂಜೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲೆಯಲ್ಲಿ ಮದ್ಯ ನಿಷೇಧ ಮಾಡಲಾಗಿದೆ.
DC nitesha patil
ಅಯೋಧ್ಯೆ ಭೂಮಿ ಪೂಜೆ ನಡೆಯುವುದರಿಂದ ರಾಜ್ಯಾದ್ಯಂತ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಹದ್ದಿನ ಕಣ್ಣಿಟ್ಟಿದೆ. ಮುಂಜಾಗ್ರತೆ ಹಿನ್ನೆಲೆ ಜಿಲ್ಲಾಡಳಿತದಿಂದ ಡ್ರೈ ಡೇ ಘೋಷಿಸಲಾಗಿದೆ.
ಇಂದು ಸಂಜೆ 6 ರಿಂದ ಗಂಟೆಯಿಂದ ಆ. 6ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated : Aug 4, 2020, 7:33 PM IST