ಕರ್ನಾಟಕ

karnataka

ETV Bharat / state

ಕಿಮ್ಸ್​ನಲ್ಲಿ ಬ್ಲಾಕ್​ ಫಂಗಸ್ ಚುಚ್ಚುಮದ್ದು ಕೊರತೆ ಇದೆ: ಡಾ.‌ಅರುಣಕುಮಾರ ಚವ್ಹಾಣ್​ - ಡಾ.‌ಅರುಣಕುಮಾರ ಚವ್ಹಾಣ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬರೋಬ್ಬರಿ 50 ಬ್ಲಾಕ್​ ಫಂಗಸ್ ಕೇಸ್​ಗಳಿವೆ. ಆದರೆ, ಚುಚ್ಚುಮದ್ದು ಕೊರತೆ ಇದೆ ಎಂದು ಕಿಮ್ಸ್ ಅಧೀಕ್ಷಕ ಡಾ.‌ಅರುಣಕುಮಾರ ಚವ್ಹಾಣ್​ ಹೇಳಿದ್ದಾರೆ.

dr-arunakumara-chavhana
ಡಾ.‌ಅರುಣಕುಮಾರ ಚವ್ಹಾಣ

By

Published : May 21, 2021, 7:30 PM IST

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್‌ಗೆ ಚುಚ್ಚುಮದ್ದು ಕೊರತೆ ಇದ್ದು, ಅಂಪೊಟೋರಿಸಿಯನ್ 2 ಸಾವಿರ ವಯಲ್‌ಗೆ ಬೇಡಿಕೆ ಇದೆ ಎಂದು ಕಿಮ್ಸ್ ಅಧೀಕ್ಷಕ ಡಾ.‌ಅರುಣಕುಮಾರ ಚವ್ಹಾಣ್​ ಹೇಳಿದ್ದಾರೆ.

ಡಾ.‌ಅರುಣಕುಮಾರ ಚವ್ಹಾಣ್​

ನಗರದಲ್ಲಿ ಮಾಹಿತಿ ನೀಡಿದ ಅವರು, ಬ್ಲಾಕ್ ಫಂಗಸ್​ನಿಂದ ಬಳಲುವವರ ಸಂಖ್ಯೆ ಇದೀಗ 50ಕ್ಕೆ ಏರಿಕೆಯಾಗಿದೆ. ಇಂತಹ ಆತಂಕಕಾರಿ ಬೆಳವಣಿಗೆ ನಡುವೆಯೇ ಅಗತ್ಯ ಔಷಧದ ಕೊರತೆ ಇದೆ. ರೋಗಿಗಳ ಚಿಕಿತ್ಸೆಗೆ ವೈದ್ಯರು ಹರಸಾಹಸಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಔಷಧ ಪೂರೈಸುವಂತೆ ಸರ್ಕಾಕ್ಕೆ ಮನವಿ ಮಾಡಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ಜಿಲ್ಲೆಗಳಿಂದ ಬ್ಲಾಕ್​ ಫಂಗಸ್ ರೋಗಿಗಳು ಕಿಮ್ಸ್​ಗೆ ದಾಖಲಾಗುತ್ತಿದ್ದು, ಬರೋಬ್ಬರಿ 50 ಕೇಸ್ ಗಳು ಇವೆ. ಡಯಾಬಿಟಿಸ್ ರೋಗಿಗಳಲ್ಲಿ ಹೆಚ್ಚಾಗಿ ಬ್ಲಾಕ್​ ಫಂಗಸ್ ಕಾಣಿಸಿಕೊಳ್ಳುತ್ತಿದೆ.

ABOUT THE AUTHOR

...view details