ಕರ್ನಾಟಕ

karnataka

ETV Bharat / state

ಮತ್ತೆ ಜೈಲಿಗೆ ಹೋಗೋಕೆ ಯಡಿಯೂರಪ್ಪಗೆ ಓಟ್ ಕೊಡ್ಬೇಕಾ?: ಸಿದ್ದರಾಮಯ್ಯ - Kannada news

ಜೈಲಿಗೆ ಹೋದ್ರು ಅಂತ ಸಿಎಂ ಸ್ಥಾನ ಕಳೆದುಕೊಂಡರು. ಇನ್ನೊಮ್ಮೆ ಕಾರಾಗೃಹಕ್ಕೆ ಹೋಗೋಕೆ ಯಡಿಯೂರಪ್ಪಗೆ ಓಟ್ ಕೊಡಬೇಕಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ‌ ಸಿದ್ದರಾಮಯ್ಯ

By

Published : May 14, 2019, 5:50 PM IST

ಹುಬ್ಬಳ್ಳಿ:ನಾವು ಸಿ.ಎಸ್ ಶಿವಳ್ಳಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಬಿಜೆಪಿ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ವಿರುದ್ದ ಮಾಜಿ ಸಿಎಂ‌ ಸಿದ್ದರಾಮಯ್ಯ ಗರಂ ಆದರು.

ಅರಳಿಕಟ್ಟಿ ಗ್ರಾಮದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದು, ಯಡಿಯೂರಪ್ಪ ಜೈಲಿಗೆ ಹೋದ್ರು ಅಂತ ಸಿಎಂ ಸ್ಥಾನ ಕಳೆದುಕೊಂಡ್ರು. ಜೈಲಿಗೆ ಅವರೇನು ಬೀಗತನ ಮಾಡಲು ಹೋಗಿದ್ರಾ? ಬಿಜೆಪಿ ಸರ್ಕಾರ ಮಾಡಿರೋ ಸಾಧನೆ ಏನು? ಇನ್ನೊಮ್ಮೆ ಜೈಲಿಗೆ ಹೋಗೊಕೆ ಯಡಿಯೂರಪ್ಪಗೆ ಓಟ್ ಕೊಡಬೇಕಾ ? ಎಂದು ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ‌ ಸಿದ್ದರಾಮಯ್ಯ ವಾಗ್ದಾಳಿ

ಯಡಿಯೂರಪ್ಪ ಕಳೆದೊಂದು ವರ್ಷದಿಂದ ‌ಸಿಎಂ ಆಗೋಕೆ ಪ್ರಯತ್ನ ಮಾಡುತ್ತಿದ್ದಾರೆ. ಸದನದಲ್ಲಿ ಬಹುಮತ ತೋರಿಸಲು ಅವರಿಂದ ಸಾಧ್ಯವಾಗಿಲ್ಲ. ಪದೇ ಪದೇ ಸಿಎಂ ಆಗ್ತಿನಿ,ಆಗ್ತಿನಿ ಅಂತಾರೆ. ವಿರೋಧ ಪಕ್ಷದ ಕೆಲಸ ಮಾಡುವುದನ್ನು ಬಿಎಸ್ವೈ ಬಿಟ್ಟಿದ್ದಾರೆ. ವಿಧಾನಸೌಧ, ಅಲ್ಲಿನ ಮೂರನೇ ಮಹಡಿ, ಸಿಎಂ ಕುರ್ಚಿ ನಿತ್ಯ ಅವರ ಕನಸಲ್ಲಿ ಬೀಳುತ್ತದೆ. ಮಾನ, ಮಾರ್ಯಾದೆ ಲಜ್ಜೆಗೆಟ್ಟವರ ಪಕ್ಷ ಬಿಜೆಪಿ ಎಂದು ಇದೇ ವೇಳೆ ಅವರು ಕಿಡಿಕಾರಿದರು.

ಮಂಡ್ಯದಲ್ಲಿ ಸುಮಲತಾಗೆ ಸಿದ್ದರಾಮಯ್ಯ ಸಪೋರ್ಟ್ ಮಾಡಿದ್ದರು ಎನ್ನುವ ಜಗದೀಶ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ರೀತಿ ಬೆಂಕಿ ಹಚ್ಚುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಸುಳ್ಳು ಹೇಳುವುದು ಬಿಟ್ಟು ಅವರಿಗೇನೂ ಗೊತ್ತಿಲ್ಲ. ಸುಮಲತಾಗೆ ಸಪೋರ್ಟ್ ಮಾಡಿದ್ದು ನಾವಾ, ಅವರಾ? ಎಂದು ಪ್ರಶ್ನಿಸಿದರು.

ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯ ಟೈ ಬಾಂಬ್ ಫಿಕ್ಸ್ ಮಾಡಿದ್ದಾರೆ ಅನ್ನೊ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ದೋಸ್ತಿ ಸರ್ಕಾರ ಇನ್ನೂ ನಾಲ್ಕು ವರ್ಷ ಭದ್ರವಾಗಿರುತ್ತದೆ. ಬಿಜೆಪಿ ಅವರಿಗೆ ಹೇಳಿಕೊಳ್ಳಲು ಏನೂ ವಿಷಯವಿಲ್ಲ.ಹೀಗಾಗಿ ಈ ರೀತಿ ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details