ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಪ್ರಾರಂಭವಾಗಿದೆ: ಕೋನರೆಡ್ಡಿ
ಈಗಾಗಲೇ ಉಮೇಶ್ ಕತ್ತಿಯವರು ನಾವು ಊಟಕ್ಕೆ ಮಾತ್ರ ಸೇರಿದ್ದೇವೆ. ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂತ್ರಿಯಾಗದ 25 ಜನ ಶಾಸಕರು ಒಂದು ಭಾಗದಲ್ಲಿ ಸೇರುತ್ತಾರೆ ಎಂದರೆ ಅದು ಅಸಮಾಧಾನದ ಹೊಗೆ ಎಂದರ್ಥವಲ್ಲವೇ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಶ್ನಿಸಿದ್ದಾರೆ.
ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ
ಧಾರವಾಡ: ಈಗಾಗಲೇ ರಾಜ್ಯದ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಪ್ರಾರಂಭವಾಗಿದೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಹೇಳಿದ್ದಾರೆ.