ಕರ್ನಾಟಕ

karnataka

ETV Bharat / state

ಕೋವಿಡ್​ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ಡಿಮ್ಹಾನ್ಸ್ ಸಂಸ್ಥೆ

ಧಾರವಾಡ ಜಿಲ್ಲಾಸ್ಪತ್ರೆ ಕಿಮ್ಸ್ ಕೊರೊನಾ ಚಿಕಿತ್ಸೆ ನೀಡಿದ್ರೆ, ಡಿಮ್ಹಾನ್ಸ್ ಸಂಸ್ಥೆ ಗುಣಮುಖರಾಗುತ್ತಿರುವ ಸೋಂಕಿತರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ.

Dharwad
ಡಿಮ್ಹಾನ್ಸ್ ನಿರ್ದೇಶಕ ಮಹೇಶ ದೇಸಾಯಿ

By

Published : May 30, 2021, 1:37 PM IST

ಧಾರವಾಡ:ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ಸೋಂಕು ತಗುಲಿದರೆ ಬದುಕು ಮುಗಿದೇ ಹೋಯ್ತಾ? ಎಂದು ಜನ ಆತಂಕಕ್ಕೊಳಗಾಗಿದ್ದಾರೆ. ಆದ್ರೆ ಜನರು ಧೈರ್ಯ ತಂದುಕೊಳ್ಳಬೇಕೆಂದು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ಡಿಮ್ಯಾನ್ಸ್) ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡುತ್ತಿದೆ.

ಡಿಮ್ಹಾನ್ಸ್ ನಿರ್ದೇಶಕ ಮಹೇಶ ದೇಸಾಯಿ

ಕೋವಿಡ್​ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲಾಸ್ಪತ್ರೆ ಕಿಮ್ಸ್ ಕೊರೊನಾ ಚಿಕಿತ್ಸೆ ನೀಡಿದ್ರೆ, ಡಿಮ್ಹಾನ್ಸ್ ಸಂಸ್ಥೆ ಗುಣಮುಖರಾಗುತ್ತಿರುವ ಸೋಂಕಿತರಲ್ಲಿ ಧೈರ್ಯ ತುಂಬುವ ಮೂಲಕ ಜನರ ಆತಂಕ‌ ದೂರ ಮಾಡುತ್ತಿದೆ.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) 16 ಜನರ ತಂಡ 4 ಲ್ಯಾಂಡ್​​ ಲೈನ್ ಫೋನ್ ಹಾಗೂ ಒಂದು ಮೊಬೈಲ್ ಮೂಲಕ ಪ್ರತಿನಿತ್ಯ ಸೋಂಕಿತರಿಗೆ ಧೈರ್ಯ ತುಂಬುತ್ತಿದೆ. ಹೋಮ್ ಐಸೋಲೇಷನ್ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಮೊಬೈಲ್​​ಗೆ ಕರೆ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ಹಾಗೂ ಕೊರೊನಾಗೆ ಭಯ ಪಡದಂತೆ ವೈದ್ಯರು ಸಲಹೆ, ಸೂಚನೆ ನೀಡುತ್ತಿದ್ದಾರೆ.

ಕೆಲವು ಸೋಂಕಿತರು ಧೈರ್ಯ, ಆತ್ಮಸ್ಥೈರ್ಯ ಕಳೆದುಕೊಂಡು ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ. ಅಂತಹ ತೊಂದರೆಗಳಿಗೆ ಒಳಗಾಗದಂತೆ ಸೋಂಕಿತರಿಗೆ ವ್ಯಾಯಾಮ, ಪ್ರಾಣಾಯಾಮದಂತಹ ಸಲಹೆ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಸೋಂಕಿತರಿಗೆ ಸಂಜೀವಿನಿಯಾಗಿ ಡಿಮ್ಹಾನ್ಸ್ ಕೆಲಸ ಮಾಡುತ್ತಿದೆ.

ABOUT THE AUTHOR

...view details