ಧಾರವಾಡ:ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ಐವರಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಪಿ-1505, ಪಿ- 1506 , ಪಿ-1507, ಪಿ -1508 ಹಾಗೂ ಪಿ -1509 ಎಂದು ಗುರುತಿಸಲಾಗಿದೆ. ಈ ಐದು ಜನರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.
ಪಿ- 1505 ಹಾಗೂ ಪಿ - 1506 ಇವರು ಹುಬ್ಬಳ್ಳಿ ಶಹರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ. ಇವರು ಮಾ. 18ರಂದು ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್‌ನಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಹೋಗಿರುತ್ತಾರೆ.
ಅಲ್ಲಿ ಮೇ 17 ರವರೆಗೆ ವಾಸವಾಗಿರುತ್ತಾರೆ. ಮೇ 17ರ 5 ಗಂಟೆಗೆ ಕುಟುಂಬದ ಒಟ್ಟು 4 ಜನ ಸದಸ್ಯರು ಸ್ಥಳೀಯ ಆಟೋ ಮೂಲಕ ಕರ್ನೂಲ್‌ನಲ್ಲಿಯ ತಮ್ಮ ಸಂಬಂಧಿಕರ ಮನೆಯಿಂದ ಹೊರಟು ಸಂಜೆ 6:30ಕ್ಕೆ ಅಲ್ಲಪೂರಂ ಚೌರಾಷ್ಟ್ರ ತಲುಪಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು , ಮಾನ್ವಿ , ಗಂಗಾವತಿ ಮಾರ್ಗವಾಗಿ ಬಂದಿದ್ದಾರೆ.
ರಾಯಚೂರಿನ ಶಕ್ತಿನಗರ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೋಸ್ಟ್ ದಾಟಿ ಮೇ 18 ರಂದು ಮುಂಜಾನೆ 8 ಗಂಟೆಗೆ ಹುಬ್ಬಳ್ಳಿ ತಲುಪಿದ್ದಾರೆ. ಮೇ 18ರಂದು ಮುಂಜಾನೆ 9 ಗಂಟೆಗೆ ಧಾರವಾಡ ತಲುಪಿರುತ್ತಾರೆ. ಅದೇ ದಿನ ಕುಟುಂಬದ ಎಲ್ಲ 4 ಜನ ಸದಸ್ಯರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನನ್ನಲ್ಲಿ ಇರಿಸಲಾಗಿರುತ್ತದೆ. ಮೇ 20 ರಂದು ಪಿ - 1505 ಹಾಗೂ ಪಿ -1506 ಇವರು ಕೋವಿಡ್ -19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .
ಪಿ - 1507 , ಪಿ - 1508 ಹಾಗೂ ಪಿ- 1509 ಇವರು ಮಹಾರಾಷ್ಟ್ರದ ಮುಂಬೈ ಶಹರದ ಶಿವಾಜಿ ನಗರದ ನಿವಾಸಿಗಳಾಗಿರುತ್ತಾರೆ. ಮೇ 16 ರಂದು ರಾತ್ರಿ 11:30ಕ್ಕೆ ಬಾಡಿಗೆ ಇನ್ನೊವಾ ವಾಹನ ಸಂಖ್ಯೆ: MH.04.ED.5367 ದ ಮೂಲಕ ಕುಟುಂಬದ 11 ಜನ ಸದಸ್ಯರು ಮುಂಬೈಯಿಂದ ಹೊರಟು ಮೇ 17 ರಂದು ರಾತ್ರಿ 8 ಗಂಟೆಗೆ ಕೊಲ್ಲಾಪುರ ಚೆಕ್ ಪೋಸ್ಟ್ ಹತ್ತಿರದಲ್ಲಿ ಊಟ ಮಾಡಿದ್ದಾರೆ.
ರಾತ್ರಿ 11.30 ಕ್ಕೆ ಕೊಲ್ಲಾಪುರ ಚೆಕ್ ಪೋಸ್ಟ್ನಿಂದ ಹೊರಟು ಮೇ 18 ರಂದು ಮುಂಜಾನೆ 5 ಗಂಟೆಗೆ ಧಾರವಾಡ ತಲುಪಿರುತ್ತಾರೆ. ಅದೇ ದಿನ ಕುಟುಂಬದ ಎಲ್ಲ 11 ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಮೇ 20ರಂದು ಇವರು ಕೋವಿಡ್-19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ . ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಈ 5 ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೊಂಕು ತಗಲುವ ಸಾಧ್ಯತೆ ಇದ್ದು , ಅಂತಹ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.