ಕರ್ನಾಟಕ

karnataka

ETV Bharat / state

ಕಟ್ಟಡ ದುರಂತ:  ಮೃತರ ಕುಟುಂಬಗಳಿಗೆ ಹೆಚ್ಚುವರಿ 2 ಲಕ್ಷ ಪರಿಹಾರ ನೀಡಲು ಸರ್ಕಾರದ ಆದೇಶ - ಸರ್ಕಾರ

ಈಗಾಗಲೇ ಜಿಲ್ಲಾಡಳಿತದಿಂದ 16 ಮೃತ ಕುಟುಂಬ ಸದಸ್ಯರಿಗೆ 2 ಲಕ್ಷ ರೂ. ಪರಿಹಾರ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಆದೇಶ ಮೇರೆಗೆ ಇನ್ನು 2 ಲಕ್ಷ ಪರಿಹಾರ ನೀಡಲು‌ ಸರ್ಕಾರ ಆದೇಶ‌ ನೀಡಿದ್ದು, ಈ‌ ಪರಿಹಾರ ಹಣ ಕಟ್ಟಡದ ಜಾಗದ ಮಾಲೀಕರಿಂದ ಮುಂದಿನ ದಿನಗಳಲ್ಲಿ ವಸೂಲಿ ಮಾಡುವ ಬಗ್ಗೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ಆದೇಶ ಪತ್ರ

By

Published : Mar 30, 2019, 2:21 PM IST

ಧಾರವಾಡ:ಕುಮಾರೇಶ್ವರ ನಗರದ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ಮತ್ತೆ ಹೆಚ್ಚುವರಿ 2 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಆದೇಶ ಮಾಡಿದೆ.

ಪಾಲಿಕೆಯಿಂದ ತಲಾ 2 ಲಕ್ಷ ರೂ. ನೀಡಲು ಆದೇಶ ಮಾಡಲಾಗಿದ್ದು, ತೀವ್ರ ಗಾಯಗೊಂಡ 15 ಜನರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಲು ಆದೇಶ ನೀಡಿದೆ.

ಈಗಾಗಲೇ ಜಿಲ್ಲಾಡಳಿತದಿಂದ 16 ಮೃತ ಕುಟುಂಬಗಳ ಸದಸ್ಯರಿಗೆ 2 ಲಕ್ಷ ರೂ. ಪರಿಹಾರ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಆದೇಶದ ಮೇರೆಗೆ ಇನ್ನು 2 ಲಕ್ಷ ಪರಿಹಾರ ನೀಡಲು‌ ಸರ್ಕಾರ ಅನುಮತಿ ನೀಡಿದ್ದು, ಈ‌ ಪರಿಹಾರ ಹಣ ಕಟ್ಟಡದ ಜಾಗದ ಮಾಲೀಕರಿಂದ ಮುಂದಿನ ದಿನಗಳಲ್ಲಿ ವಸೂಲಿ ಮಾಡುವ ಬಗ್ಗೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ABOUT THE AUTHOR

...view details