ಕರ್ನಾಟಕ

karnataka

ETV Bharat / state

15 ಲಕ್ಷ ದೋಚಿ ಪರಾರಿಯಾಗಿದ್ದ ಆರೋಪಿಗಳು ಅಂದರ್

ಅಕ್ಷಯ ತೃತೀಯ ದಿನದಂದು ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ನಂಬಿಸಿ 15 ಲಕ್ಷ ದೋಚಿದ್ದ ಆರೋಪಿಗಳನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ

ವಿದ್ಯಾಗಿರಿ ಪೊಲೀಸ್​ರು ಬಂಧಿಸಿದ ಆರೋಪಿಗಳೊಂದಿಗೆ ಪೊಲೀಸ್​ರ ವಿಶೇಷ ತಂಡ

By

Published : May 10, 2019, 11:18 PM IST

ಧಾರವಾಡ: ಅಕ್ಷಯ ತೃತೀಯ ದಿನದಂದು ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ಆಮಿಷವಡ್ಡಿ 15 ಲಕ್ಷ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್ ತಿಳಿಸಿದರು.

ನಗರದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾಲರ್ಸ್ ಕಾಲೋನಿ ನಿವಾಸಿ ಅಪ್ರೋಜ್ ಖಾನ್​ ಹೊನ್ನಳ್ಳಿ, ಕಮರಿಪೇಟೆಯ ಮಹ್ಮದ ಅಸ್ಲಂ ಐನಾಪೂರಿ, ಬಂಡಿವಾಡ ಅಗಸಿಯ ಆಸೀಫ್ ಸಾಗರ ಕಚ್ಚಿ ಎಂಬುವವರೇ ಬಂಧಿತ ಆರೋಪಿಗಳು. ಇವರ ಜೊತೆ ಇನ್ನೂ ಐವರು ಇರುವ ಶಂಕೆ ಇದೆ ಎಂದರು.

15 ಲಕ್ಷ ವಂಚಿಸಿ ಪರಾರಿಯಾಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ವಿದ್ಯಾಗಿರಿ ಪೊಲೀಸ್​ರು

ಅಕ್ಷಯ ತೃತೀಯ ದಿನದಂದು ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ಕರೆಯ ಮೂಲಕ ಸಂಪರ್ಕಿಸಿದ ಆರೋಪಿಗಳು ಚಳ್ಳಕೇರಿಯ ಜೆ.ಆರ್.ರವಿಕುಮಾರ್ ಅವರನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಅವರ ಬಳಿ ಇದ್ದ 15 ಲಕ್ಷ ಹಣವನ್ನು ದೋಚಿಕೊಂಡು ಹೋಗಿದ್ದರು. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಬೆನ್ನು ಬಿದ್ದಿದ್ದರು. ಡಿಸಿಪಿ ಡಿ.ಎಲ್.ನಾಗೇಶ, ಶಿವಕುಮಾರ ಹಾಗೂ ಎಸಿಪಿ ಎಂ.ಎನ್.ರುದ್ರಪ್ಪ ಅವರ ತಂಡ ಆರೋಪಿಗಳಿಗೆ ಬಲೆ ಬೀಸಿತ್ತು.

ಬಂಧಿಸಿದ ಆರೋಪಿಗಳೊಂದಿಗೆ ಪೊಲೀಸರು

ಬಂಧಿತರಿಂದ ಒಂದು ಸ್ಕೋಡಾ ಕಾರು, ರಾಯಲ್ ಎನ್​ಫಿಲ್ಡ್ ಬೈಕ್, ಹೊಂಡಾ ಡಿಯೋ ಸ್ಕೂಟಿ, ಎರಡು ಚಾಕು ಹಾಗೂ ನಾಲ್ಕು ಮೊಬೈಲ್ ಸೇರಿದಂತೆ 23.45 ಲಕ್ಷ ರೂ. ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ABOUT THE AUTHOR

...view details