ಕರ್ನಾಟಕ

karnataka

ETV Bharat / state

Vajpayee ಬಗ್ಗೆ ಕೀಳಾಗಿ ಮಾತನಾಡಿದವರ ನಾಶ ನಿಶ್ಚಿತ: ಶೆಟ್ಟರ್​ ಆಕ್ರೋಶ - ಅಟಲ್ ಬಿಹಾರಿ ವಾಜಪೇಯಿ

ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎಂದು ಜನಸಾಮಾನ್ಯರಿಗೆ ಗೊತ್ತಿದೆ. ನಮ್ಮ ಹೆಮ್ಮೆಯ ನಾಯಕ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿವರ ಬಗ್ಗೆ ಕಾಂಗ್ರೆಸ್ಸಿಗರು ಕೀಳಾಗಿ ಮಾತನಾಡುತ್ತಿದ್ದಾರೆ. ಅಂತವರೆಲ್ಲ ನಾಶವಾಗಿ ಹೋಗ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಕಿಡಿಕಾರಿದರು.

spoke-vaguely-about-vajpayee-is-surely
ಜಗದೀಶ್​ ಶೆಟ್ಟರ್​

By

Published : Aug 16, 2021, 4:57 PM IST

ಹುಬ್ಬಳ್ಳಿ: ಕೆಲವರು ಮಾಜಿ ಪ್ರಧಾನಿ ದಿವಂಗತ ಅಟಲ್​​ ಬಿಹಾರಿ ವಾಜಪೇಯಿ ಅವರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಅಂತಹವರು ಖಂಡಿತ ನಾಶವಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಬಿಜೆಪಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಅವರ ನೇತೃತ್ವದಲ್ಲಿ ನಡೆದ 'ಜನಾಶೀರ್ವಾದ ಯಾತ್ರೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯಾವ ಹಂತದಲ್ಲಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ. ಕಾಂಗ್ರೆಸ್ಸಿಗರು ನಮ್ಮ ಹೆಮ್ಮೆಯ ನಾಯಕ ಅಟಲ್ ಬಿಹಾರಿ ವಾಜಪೇಯವರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಅವರು ಖಂಡಿತ ಅಂತವರೆಲ್ಲ ನಾಶವಾಗಿ ಹೋಗುತ್ತಾರೆ ಎಂದು ಶಾಸಕ ಪ್ರಿಯಾಂಕ್​ ಖರ್ಗೆ ವಿರುದ್ಧ ಕಿಡಿಕಾರಿದರು.

ಇತ್ತೀಚೆಗೆ ಕಲಬರುಗಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಹುಕ್ಕಾ ಬಾರ್​ ಹೇಳಿಕೆಗೆ ಟಾಂಗ್​ ಕೊಡುವ ಸಂದರ್ಭದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಬಗ್ಗೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹಗುರವಾಗಿ ಮಾತನಾಡಿದ್ದರು. ಇದಕ್ಕೆ ಶೆಟ್ಟರ್​ ಗರಂ ಆಗಿದ್ದಾರೆ. ​

ವಾಜಪೇಯಿ ಅವರ ಬಗ್ಗೆ ಕೀಳಾಗಿ ಮಾತನಾಡಿದವರ ನಾಶ ಖಂಡಿತ- ಜಗದೀಶ್​ ಶೆಟ್ಟರ್​

ಬಿಜೆಪಿ ಪಾಲಿಕೆಯ ಚುನಾವಣೆಯಲ್ಲಿ ದಾಖಲೆಯ ಜಯವನ್ನು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಜನಪರ ಕಾರ್ಯವನ್ನು ಮಾಡಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಕೆಲಸ ಜನರಿಗೆ ಗೊತ್ತಿದೆ. ಆದ್ದರಿಂದ ಪಾಲಿಕೆ ಚುನಾವಣೆಯಲ್ಲಿ ಜನರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೈಲಿಗೆ ಹೋಗಿ ಬರುವವರ ಮೆರವಣಿಗೆಯಲ್ಲ ಈ ಯಾತ್ರೆ..

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜಾಧ್ಯಕ್ಷ ನಳಿನಕುಮಾರ್ ಕಟೀಲ್, ಜನರು ಕೊಟ್ಟ ಆಶೀರ್ವಾದವನ್ನು ಬಿಜೆಪಿ ಎಂದೂ ಮರೆಯಲ್ಲ. ಜೈಲಿಗೆ ಹೋಗಿ ಬರುವವರ ಯಾತ್ರೆ ಅಲ್ಲ ಇದು, 7 ವರ್ಷಗಳ ಹಿಂದೆ ಬದಲಾವಣೆಯಿಂದ ಆರಂಭವಾದ ಯಾತ್ರೆ ಎಂದು ಗುಡುಗಿದರು.

ನರೇಂದ್ರ ಮೋದಿ ಮಂತ್ರಿಮಂಡಲ ಸಾಮಾಜಿಕ ನ್ಯಾಯದ ಆಧಾರದಡಿಯಲ್ಲಿ ರಚನೆ ಆಗಿದೆ. ಅದ್ಬುತವಾದ ಮಂತ್ರಿ ಮಂಡಲದಲ್ಲಿ ಹಿರಿಯರು-ಕಿರಿಯರು ಇದ್ದಾರೆ. ಜನರು ಹಾಕಿದ ಮತದಿಂದ ಭಾರತಕ್ಕೆ ಇಂದು ವಿಶ್ವಸಂಸ್ಥೆಯ ಅಧ್ಯಕ್ಷ ಸ್ಥಾನ ಸಿಗುವಂತಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ವಿರೋಧ‌ ಮಾಡಲೆಂದೇ ವಿರೋಧ ಪಕ್ಷವಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ಭವಿಷ್ಯದ ಅಂಗಡಿ ಶುರು ಮಾಡಿದ್ದಾರೆ. ಕಾಂಗ್ರೆಸ್ ನವರು ನಿರುದ್ಯೋಗಿಗಳು ಆಗಿದ್ದಾರೆ. ಅದಕ್ಕಾಗಿ ಅವರು, ಭವಿಷ್ಯದ ಅಂಗಡಿ ತೆರೆಯಬೇಕು. ಇಲ್ಲವೇ ಸುಳ್ಳು ಹೇಳುವ ಅಂಗಡಿ ತೆರೆಯಬೇಕು ಎಂದರು. ಅಲ್ಲದೆ ಬೊಮ್ಮಾಯಿಯವರ ಅಮೃತ ಯೋಜನೆಯಿಂದ‌ ಕಾಂಗ್ರೆಸ್​ನವರು ನಿರುದ್ಯೋಗಿ ಆಗಿದ್ದಾರೆ ಎಂದು ಲೇವಡಿ ಮಾಡಿದರು.

ABOUT THE AUTHOR

...view details